ಮರಿಯಮ್ಮನಹಳ್ಳಿ:ಆಯುಧಪೂಜೆ ನಿಮಿತ್ತ ಪಟ್ಟಣದ ಪೋಲಿಸ್ ಠಾಣೆಯಲ್ಲಿ,ಖಾಕಿ ಬದಲಿಗೆ ಎಲ್ಲೆಲ್ಲೂ ಬಿಳಿಬಣ್ಣದ ಉಡುಪುತೊಟ್ಟವರೆ ಕಾಣಿಸುತ್ತಿದ್ದರು.ಇವರಾರೆಂದು ತಲೆಕೆಡಿಸಿಕೊಂಡವರಿಗೆ, ಪಿ.ಎಸ್.ಐ.ಮೌನೇಶರಾಥೋಡ್ ಸಮೇತ ಠಾಣೆಯ ಎಲ್ಲಾ ಸಿಬ್ಬಂದಿಗಳು ಸಾಂಪ್ರದಾಯಿಕ ಬಿಳಿ ಪಂಚೆ,ಅಂಗಿ ವಸ್ತ್ರ ಧರಿಸಿ, ಪ್ರತಿನಿತ್ಯದ ಸಮವಸ್ತ್ರಕ್ಕೆ ಗುಡ್ ಬೈ ಹೇಳಿದ್ದರು.ಸಾಂಪ್ರದಾಯಿಕ ಬಟ್ಟೆಗಳಲ್ಲಿ ಪಾಲ್ಗೊಂಡು ಕಂಗೊಳಿಸಿದರು ಹಾಗು ಹಬ್ಬದ ಸಂಭ್ರಮವನ್ನು ಅನುಭವಿಸಿದರು. ಪೋಲಿಸರೆಂದರೆ ಭಯ ಎನ್ನುವ ವಾತವರಣದಲಿ,ಜನಸ್ನೇಹಿ ವಾತಾವರಣ ನಿರ್ಮಿಸಿದ್ದರು.ಇಲಾಖೆಯ ಸಾಮಾಗ್ರಿಗಳಿಗೆ ಸಾಂಪ್ರಾದಾಯಿಕವಾಗಿ ಪೂಜಿಸಿ,ಅತಿಥಿಗಳನ್ನು ಸತ್ಕರಿಸಿ,ಪ್ರಶಂಸೆಗೆ ಪಾತ್ರರಾದರು.ನಮ್ಮ ಸಂಸ್ಕೃತಿ,ಸಂಸ್ಕಾರಗಳನ್ನು ಅಳವಡಿಸಿಕೊಳ್ಳಲು ನಾವು ಮುಂದಾಗಬೇಕೆಂದು ಪಿ.ಎಸ್.ಐ.ಮೌನೇಶರಾಥೋಡ್ ಹೇಳಿದರು.

