ಬಳ್ಳಾರಿ: ಗಣಿ ಸಂಪತ್ತು ಲೂಟಿ ಮಾಡಿದ ನಿನಗೆ ನಮ್ಮ ಶಾಸಕ ನಾರಾ ಭರತ್ ರೆಡ್ಡಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಚಾನಳ್ ಶೇಖರ್ ಅವರು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ನಕ್ಷತ್ರ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಶಾಸಕ ನಾಗಿದ್ದು ಅಲ್ಲಿನ ಅಭಿವೃದ್ಧಿ ಮಾಡುವುದು ಬಿಟ್ಟು ಬಳ್ಳಾರಿ ಅಭಿವೃದ್ಧಿ ಬಗ್ಗೆ ಏಕೆ ಚಿಂತೆ, ಸೋ ಕಾಲ್ಡ್ ನಾಯಕರಿಂದ ಪತ್ರಿಕಾಗೋಷ್ಠಿ ನಡೆಸಿದ ಬಗ್ಗೆ ಕಿಡಿಕಾರಿದರು.ಭರತ್ ರೆಡ್ಡಿ ಅವರಿಗೆ ಟಿಕೆಟ್ ತಪ್ಪಿಸಲು ಯಾರು ಯಾರು ಹತ್ತಿರ ಹೋಗಿ ಬಕೆಟ್ ಹಿಡಿಯುವ ಕೆಲಸ ಮಾಡಿದ್ದೀಯಾ ಎಂಬುದು ನಮಗೆ ಗೊತ್ತಿದೆ ನಿಮ್ಮಂತವರು ನಮ್ಮ ನಾಯಕನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.ನಿಮ್ಮ ಅಧಿಕಾರದ ಅವಧಿಯಲ್ಲಿನ ಆಡಳಿತ ಮತ್ತು ಅಕ್ರಮ ಗಣಿಗಾರಿಕೆ ನೋಡಿ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೆಸರು ಇಟ್ಟಿದ್ದಾರೆ ಎಂದರು.ಉಚ್ಛ ನ್ಯಾಯಾಲಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಿಮ್ಮನ್ನು ಗಡಿಪಾರು ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಸತೀಶ್ ರೆಡ್ಡಿ ಅವರು ಮಾತನಾಡಿ ಜನಾರ್ಧನ ರೆಡ್ಡಿ ಅವರು ಹಿಂಬಾಗಿಲ ರಾಜಕಾರಣ ಮಾಡಿದವರು ನೀವು ಜನರ ಸೇವೆ ಮಾಡಲಿಲ್ಲ,ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಂತ ಹೆಸರಿಟ್ಟಿದ್ದಾರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕ ಮತ್ತು ಆಂಧ್ರದ ಗಡಿ ಒತ್ತುವರಿ ಮಾಡಿದ ಬಗ್ಗೆ ಸಂತೋಷ್ ಹೆಗ್ಡೆ ಅವರು ವಿವರವಾಗಿ ವರದಿ ನೀಡಿದ್ದಾರೆ ಎಂದರು. ಶಾಸಕ ಭರತ್ ರೆಡ್ಡಿ ಅವರು ಬೈ ಚಾನ್ಸ್ ಎಂಎಲ್ಎ ಆಗಿ ಇಲ್ಲ ಬೈ ಚಾಯ್ಸ್ ಎಂಎಲ್ಎ ಆಗಿದ್ದಾರೆ.ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭರತ್ ರೆಡ್ಡಿಯ ಕುಟುಂಬಸ್ಥರು ಐದು ಜನ ಎಂಎಲ್ಎ ಗಳು ಮಾತ್ರ ಇಲ್ಲ ನಗರ ಕ್ಷೇತ್ರದ 2ಲಕ್ಷ 40ಸಾವಿರ ಜನರೆಲ್ಲಾ ಎಂಎಲ್ಎ ಗಳೇ ತಿರುಗೇಟು ನೀಡಿದ್ದಾರೆ.ಶಾಸಕ ನಾರಾ ಭರತ್ ರೆಡ್ಡಿ ಅವರನ್ನುಗಾಂಜಾ ಗಿರಾಕಿ ಎಂದು ಹೇಳುವ ನೀವು ಜಿಲ್ಲೆಯಲ್ಲಿ ಗಾಂಜಾ, ಮಟ್ಕಾ, ಕ್ಲಬ್ ನಿಷೇಧ ಮಾಡಿದ್ದಾರೆ.ದೇವಿ ರೆಡ್ದಿ ಸತ್ತ 22 ವರ್ಷದ ನಂತರ ಕೇಸ್ ದಾಖಲಿಸಿದ್ದಾರೆ ಸದ್ಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದರುಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ .ಹುಸೇನ್ ಪೀರಾ, .ಕೆಎನ್ಎಂ ಅಭಿಲಾಶ್ ಬಯೋಪಾಟಿ ವಿಷ್ಣು, ನಂದೀಶ್ ,ಮಿಂಚು ಸೀನಾ, ಜಗನ್,ರಾಮಾಂಜನೇಯ, ಪೆರಂ ವಿವೇಕ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಇದ್ದರು..