ಬಳ್ಳಾರಿಯಲ್ಲಿ ಶಾಂತಿ ಕಾಪಾಡಿಕೊಳ್ಳಲಿ

ಬೆಳಗಾಯಿತು ವಾರ್ತೆ | Www.belagayithu.in

ಬಳ್ಳಾರಿ : ಇಲ್ಲಿಗೂ ಬರವುದುಕ್ಕಿಂತ ಮುಂಚೆ ನಾನು ಎಲ್ಲಾ ಮಾಹಿತಿ ತಿಳಿದುಕೊಂಡಿದ್ದೇನೆ. ಬಳ್ಳಾರಿ ಘಟನೆ ನನಗೆ ಬಹಳ ದುಃಖ ತಂದ್ದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.ನಗರದ ರಾಯಲ್ ಪೋರ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.ಪಕ್ಷತೀತವಾಗಿ ಕಾರ್ಯಕ್ರಮ ಮಾಡಬೇಕಿತ್ತು ಹಾಗೂ ಈ ಜಿಲ್ಲೆ ಯಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಾಗಿದ್ದಾರೆ. ಪ್ರತಿಮೆ ಯನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಕುರಿತು ಶ್ರೀ ರಾಮುಲು ಅವರು ನನಗೆ ಮಾಹಿತಿ ನೀಡಿ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುವುದ್ದಿಲ್ಲ ಎಂದು ಅವರು ಹೇಳಿದ್ದರು ಅದು ಅವರ ವೈಕ್ತಿಕ ವಿಚಾರ ಎಂದರು.

ಜನಾರ್ಧನ್ ರೆಡ್ಡಿ ಅವರಿಗೆ ಕೇಂದ್ರ ಸರ್ಕಾರ ಝೆಡ್ ಪ್ಲಸ್ ಸೆಕ್ಯೂರಿಟಿ ಕೊಡಲಿ ತೊಂದರೆ ಏನ ಇಲ್ಲ. ಕುಮಾರ ಸ್ವಾಮಿ ಅವರು ಎರಡು ಪೋಸ್ಟ್ ಮಾರ್ಟ್ಂ ಮಾಡಿದ್ದಾರೆ ಎಂದು ಆರೋಪವನ್ನು ಯಾವ ಲೆಕ್ಕದಲ್ಲಿ ಮಾಡಿದರೋ ಗೊತ್ತಿಲ್ಲ ಅವರಿಗೆ ಮಾಹಿತಿ ಹೇಗೋ ಸಿಕ್ಕಿದೆ ಗೊತ್ತಿಲ್ಲ. ಆದರೆ ರಾಜಕೀಯ ಕ್ಕಾಗಿ ಸಾರ್ವಜನಿಕರಿಗೆ ಯಾವುದೇ ತಪ್ಪು ಮಾಹಿತಿ ನೀಡಬೇಡಿ ಎಂದರು.ರೆಡ್ಡಿ ಅವರಿಗೆ ಬುಲೆಟ್ ಎಲ್ಲಿ ಬಿದ್ದಿದೆ ಎಂದು ಮಾಧ್ಯಮದವರಿಗೆ ಪ್ರಶ್ನೆಕೇಳಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles