ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ, ಮಾರ್ಚ್ 05: ಬಳ್ಳಾರಿ ಮಾಜಿ ಮೇಯರ್ ಮಗ ಅಟ್ಟಹಾಸ ಮೆರೆದಿದ್ದಾನೆ. ಮಾಜಿ ಮೇಯರ್ ಮಗ ರಘು ಮತ್ತವರ ಗ್ಯಾಂಗ್ ಹುಟ್ಟು ಹಬ್ಬದ ಸಂಭ್ರಮಾಚರಣೆ ನಿಮಿತ್ತ ರಸ್ತೆಯಲ್ಲಿ ಡಿಜೆ ಹಾಕಿ, ತಲವಾರು ಹಿಡಿದು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ದಾರಿ ಬಿಡಿ ಎಂದು ಯುವಕ ತಿಪ್ಪೇಸ್ವಾಮಿ ಹೇಳಿದರು. ಇದಕ್ಕೆ ರಘು ಹಾಗೂ ಅವನ ಸ್ನೇಹಿತರು ತಿಪ್ಪೇಸ್ವಾಮಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಇದರಿಂದ ತಿಪ್ಪೇಸ್ವಾಮಿ ತೀವ್ರ ಗಾಯಗಳಾಗಿವೆ. ಇನ್ನು ಪ್ರಕರಣ ಸಂಬಂಧ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ರಘು ಸೇರಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿ ರಘು ಸೇರಿ ಏಳು ಜನರ ಬಂಧನವಾಗಿದೆ.