ಬೆಳಗಾಯಿತು ವಾರ್ತೆ |www.belagayitu.in
ಬಳ್ಳಾರಿ: ಬೆಂಗಳೂರಿನ ವೈಟ್‍ಫೀಲ್ಡ್‍ನ ಜೀ ಸ್ವಿಮ್ ಅಕಾಡೆಮಿಯಲ್ಲಿ ಶನಿವಾರ ದಂದು ನಡೆದ 2023-24 ನೇ ಸಾಲಿನ ರಾಜ್ಯ ಮಟ್ಟದ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಸ್ಪಧೆಗಳಲ್ಲಿ ಬಳ್ಳಾರಿ ಜಿಲ್ಲೆಗೆ ಒಟ್ಟು 13 ಚಿನ್ನದ ಪದಕ, 2 ಬೆಳ್ಳಿ ಪದಕಗಳನ್ನು ಲಭಿಸಿವೆ. ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ, ಈಜು ಸ್ಪರ್ಧಿಗಳಾದ ಗೋಪಿಚಂದ್, ಯೋಜಿತ್, ಸಾಯಿ ಬೇಬಿ, ಸಾಯಿ ನಿಖಿಲ್, ಕೆ.ಕವಿತಾ ಅವರು ಭಾಗವಹಿಸಿದ್ದರು.
ಈಜುಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಗೋಪಿಚಂದ್ ಅವರಿಗೆ 3 ಚಿನ್ನದ ಪದಕ, ಯೋಜಿತ್‍ಗೆ 3 ಚಿನ್ನದ ಪದಕ, ಸಾಯಿ ಬೇಬಿ ಅವರಿಗೆ 3 ಚಿನ್ನದ ಪದಕ, ಸಾಯಿ ನಿಖಿಲ್‍ಗೆ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಮತ್ತು ಕೆ.ಕವಿತಾ ಅವರಿಗೆ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ರಜನಿ ಲಕ್ಕ, ಸ್ವಾಮಿ, ಶರತ್ ಗಾಯಕ್‍ವಾಡ್(ಅರ್ಜುನ ಪ್ರಶಸ್ತಿ ಪುರಸ್ಕಂತ) ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದರು.
ರಾಷ್ಟ್ರ ಮಟ್ಟಕ್ಕೆ ಆಯ್ಕೆ:
ಇದೇ ಮಾರ್ಚ್ 29 ರಿಂದ 31 ರ ವರೆಗೆ ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ.