ಬೆಳಗಾಯಿತು ವಾರ್ತೆ
ಬಳ್ಳಾರಿ : 2024-25ನೇ ಸಾಲಿನಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ವಿತರಿಸಿದ ಕೆಸಿಸಿ ಅಲ್ಪಾವಧಿ ಸಾಲಗಳು ಹಾಗೂ ಪಶು–ಮೀನುಗಾರಿಕೆ ದುಡಿಯುವ ಬಂಡವಾಳ ಸಾಲಗಳ ವಸೂಲಾತಿ ಆಧಾರದ ಮೇಲೆ ಸಹಕಾರ ಸಂಘಗಳಿಗೆ ನೀಡುವ ಬಡ್ಡಿ ಮಾರ್ಜಿನ್ ಮೊತ್ತವನ್ನು ಶೇಕಡಾ 1.75ರಿಂದ 3ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ, ವಿಜಯನಗರ–ಬಳ್ಳಾರಿ ಜಿಲ್ಲಾ ಫ್ಯಾಕ್ಸ್ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಸೋಮವಾರ ನಡೆಸಲಾಯಿತು.
ನಗರದ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆದಿದ್ದು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ಸಂದರ್ಭದಲ್ಲಿ ಉಪಾಧ್ಯಕ್ಷ ದ್ಯಾಮಣ್ಣನವರ ಬಸವರಾಜ್, ಪ್ರಧಾನ ಕಾರ್ಯದರ್ಶಿ ಕಟ್ಟೆ ಎರ್ರಿಸ್ವಾಮಿ, ಖಜಾಂಚಿ ಪದ್ಮಶಾಲಿ ಆಂಜನೇಯ(CEO ಕುಡಿತಿನಿ), ಕಾರ್ಯದರ್ಶಿ ಜಡೇಶ್ ರೆಡ್ಡಿ, ಡಿ. ಹೆಚ್ ನಿಂಗಪ್ಪ, ಹುಲಿಕಂಠಪ್ಪ ಬಣಕಾರ್, ಮದ್ವೇಶ್ವರ್ ರಾವ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಒಕ್ಕೂಟದವರು ಉಪಸ್ಥಿತರಿದ್ದರು.





