ಬೆಳಗಾಯಿತು ವಾರ್ತೆ | Www.belagayithu.in
ಮುಂಬೈ: ಬಾಲಿವುಡ್ ನಟ ಧರ್ಮೇಂದ್ರ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು.
ಶೋಲೆ, ಚುಪ್ಕೆ–ಚುಪ್ಕೆ, ಬಾಂಧಿನಿ, ಸತ್ಯಕಾಮ್ ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 2004ರಲ್ಲಿ ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು.ಪದ್ಮಭೂಷಣ, ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರು ಪತ್ನಿ ಹೇಮಾ ಮಾಲಿನಿ, ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಪುತ್ರಿಯರಾದ ವಿಜೇತಾ, ಅಜೀತಾ, ಇಶಾ ಮತ್ತು ಅಹಾನಾ ಅವರನ್ನು ಅಗಲಿದ್ದಾರೆ.
ತಮ್ಮ ವಿಭಿನ್ನವಾದ ನೋಟದಿಂದಲೇ ಹೆಸರುವಾಸಿಯಾಗಿದ್ದ ಧರ್ಮೇಂದ್ರ ಅವರು, ಶೋಲೆ, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್, ಧರಮ್ ವೀರ್, ಜುಗ್ನು, ಬಾಂದಿನಿ, ಡ್ರೀಮ್ ಗರ್ಲ್, ಚರಸ್, ಸೀತಾ ಔರ್ ಗೀತಾ ಮತ್ತು ಪ್ರತಿಗ್ಯಾ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.





