ಬೆಳಗಾಯಿತುವಾರ್ತೆ, ಮರಿಯಮ್ಮನಹಳ್ಳಿ:ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಸಚಿವರು,ದೇಶದ ಪ್ರಧಾನಮಂತ್ರಿಗಳಿಗೆ ಅಗೌರವಯುತವಾಗಿ ಮಾತನಾಡುತ್ತಾರೆ.ಇಂತಹ ಸಂಸ್ಕೃತಿಯ ಮುಖ್ಯಮಂತ್ರಿಹಾಗುಸಚಿವರ,ಭೇಟಿಗೆ ಪ್ರಧಾನಮಂತ್ರಿಗಳು ಒಪ್ಪುವುದಿಲ್ಲ ಎಂದು ಹ.ಬೊ.ಹಳ್ಳಿ ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಅವರು ಪಟ್ಟಣದ ನಾಣಿಕೆರೆವೃತ್ತದಲ್ಲಿ ಜಿಲ್ಲಾಖನಿಜನಿಧಿಯ 28.46ಕೋಟಿರೂ.ಗಳ 100ಅಡಿ ಎತ್ತರದ ಧ್ವಜಸ್ಥಂಭ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಪ್ರಧಾನಮಂತ್ರಿ, ಕೇಂದ್ರಸಚಿವರೊಂದಿಗೆ ರಾಜ್ಯದ ಸಚಿವರು ಸಮನ್ವಯ ಕಾಪಾಡಿಕೊಳ್ಳದ ಕಾರಣಕ್ಕಾಗಿ ಬರಗಾಲ ಪರಿಹಾರ ಮಂಜೂರು ಆಗಿಲ್ಲ ಎಂದು ಅವರು ಹೇಳಿದರು..ಹಗರಿಬೊಮ್ಮನಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ಇಲಾಖೆ ಕ್ರಿಯಾಯೋಜನೆ ರೂಪಿಸಿದ್ದು, ಯಾವುದೇ ಅನುದಾನ ಬಿಡುಗೆಮಾಡಿಲ್ಲ.ಹೀಗಾಗಿ ಅಭಿವೃದ್ಧಿಪಡಿಸುವ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಸರ್ಕಾರದ ಧೋರಣೆಯನ್ನು ದೂರಿದರು.
