ಮರಿಯಮ್ಮನಹಳ್ಳಿ:ಮುಂಬರುವ ಸ್ಥಳಿಯ ತಾ.ಪಂ.ಜಿ.ಪಂ.ಚುನಾವಣೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು,ಜಿಲ್ಲೆಯ 10 ಬ್ಲಾಕ್ ಕಾಂಗ್ರೆಸ್ ಘಟಕಗಳನ್ನು ಬಲಪಡಿಸಲು ಜಿಲಾದ್ಯಂತ ಸಂ I’m ಚರಿಸಲು ಮುಂದಾಗಿದ್ದೇನೆಂದು ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್ ಷೇಕ್ ಹೇಳಿದರು.ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿ ದೇವರ ದರ್ಶನಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷರುಗಳು ಕಡ್ಡಾಯವಾಗಿ,ಕಚೇರಿಗಳನ್ನು ಆರಂಭಿಸ ಬೇಕು ಹೊರತು,ಮನೆಗಳಲ್ಲಿ ಪಕ್ಷದ ಚಟುವಟಿಕೆಗಳನ್ನು ನಡೆಸದಂತೆ,ರಾಜ್ಯ ಅಧ್ಯಕ್ಷರ ಖಡಕ್ ಸೂಚನೆಯಂತೆ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿದೆ.
ಪಕ್ಷದ ಕಾರ್ಯಕರ್ತರ ಚುನಾವಣೆಗಳಾದ ತಾ.ಪಂ,ಜಿ.ಪಂ.ಚುನಾವಣೆಗಳು,ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಬಲವರ್ದನೆಗೆ ಮುಂದಾಗಿದ್ದೇನೆ.ಅಖಂಡಬಳ್ಳಾರಿ ಜಿಲ್ಲೆಯಲ್ಲಿ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಗೆದ್ದಿದೆ ಬಿಟ್ಟರೆ,2-3ಚುನಾವಣೆಗಳಲ್ಲಿ ಬೇರೆ ಪಕ್ಷಗಳು ಗೆದ್ದಿದೆ ಎಂದರು.
