ಬೆಳಗಾಯಿತು ವಾರ್ತೆ |www.belagayitu.in
ಬೆಂಗಳೂರು: ಲೋಕಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯ ಶುರು ಮಾಡಿದ್ದು, ಈ ಬಾರಿ ಗೆಲ್ಲಲೇಬೇಕೆಂಬ ಪಣತೊಟ್ಟು ಮೂರೂ ಪಕ್ಷಗಳು ರಾಜ್ಯದಲ್ಲಿ ಕ್ಯಾಂಪೇನ್ ಶುರು ಮಾಡಿದೆ. ಕರ್ನಾಟಕ ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಪ್ರಚಾರ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸ್ಟಾರ್ ಪ್ರಚಾರಕರ ಲಿಸ್ಟ್ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಪಟ್ಟಿ
ಕಾಂಗ್ರೆಸ್ ಲೋಕಸಭಾ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಅನೇಕ ರಾಜ್ಯ ನಾಯಕರ ಹೆಸರಿದೆ. ಆ ಪೈಕಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕ ಗಾಂಧಿ, ರಣದೀಪ್ ಸುರ್ಜೆವಾಲಾ, ವೀರಪ್ಪ ಮೊಯ್ಲಿ, ಬಿವಿ ಶ್ರೀನಿವಾಸ್, ಲಕ್ಷ್ಮಣ ಸವದಿ, ಈಶ್ವರ್ ಖಂಡ್ರೆ, ವಿನಯಕುಮಾರ್ ಸೊರಕೆ, ಬಿಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಡಾ.ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ಎಂಬಿ ಪಾಟೀಲ್ ಸಹ ಸೇರಿದ್ದಾರೆ.
ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಎಚ್ ಎಂ ರೇವಣ್ಣ, ಪಿಜಿ ಆರ್ ಸಿಂಧ್ಯಾ, ಬಿ ಸೋಮಶೇಖರ್, ಎಲ್ ಹನುಮಂತಯ್ಯ, ಜಿಸಿ ಚಂದ್ರಶೇಖರ, ಸೈಯದ್ ನಾಸಿರ್ ಹುಸೇನ್, ಅಭಿಷೇಕ್ ದತ್, ಜಮೀರ್ ಅಹಮದ್ ಖಾನ್, ಮಧು ಬಂಗಾರಪ್ಪ, ಪಿಟಿ ಪರಮೇಶ್ವರ್ ನಾಯಕ್, ವಿ ಎಸ್ ಉಗ್ರಪ್ಪ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಪುಷ್ಪಾ ಅಮರನಾಥ್, ಉಮಾಶ್ರೀ, ಕೆ.ಸಿ.ವೇಣುಗೋಪಾಲ್ ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.