ಮರಿಯಮ್ಮನಹಳ್ಳಿ: 108 ಆಂಬುಲೆನ್ಸ್ ಸೇವೆ ಸಮಸ್ಯೆಗಳ ಗೂಡಾಗಿದೆ. ಜೀವ ಉಳಿಸಬೇಕಿರೋ ಆಂಬುಲೆನ್ಸ್ಗಳು ಡಕೋಟ ಎಕ್ಸ್ಪ್ರೆಸ್ ಆಗಿ. ಪಟ್ಟಣದ 108 ವಾಹನ ದುರಸ್ತಿಗೆ ಹೋಗಿ(ಆಸ್ಪತ್ರೆಗೆ ಸೇರಿ) ಎರಡು ತಿಂಗಳಾದರೂ ಇದುವರೆಗೂ ಚಿಕಿತ್ಸೆ ಪಡೆದು ಮನೆಗೆಬಂದಿಲ್ಲ. ಇದರಿಂದಾಗಿ ಹೋಬಳಿಯ ತರ‍್ತು ಸೇವೆಗಳಿಗೆ ಕಂಟಕ.
https://belagayithu.in/?p=311(opens in a new tab)
ಆಂಬುಲೆನ್ಸ್ ನರ‍್ವಹಣೆಯಲ್ಲೇ 108 ತೊಂದರೆ! ಯಾದರೆ ಇನ್ನೂ ‘ಇಂಜೆಕ್ಷನ್’ ಕೊಡರ‍್ಯಾರು ಈ ಸಮಸ್ಯೆಗೆ? ನಿಮಗೆ ಅತೀಯಾದ ಆರೋಗ್ಯ ಸಮಸ್ಯೆ ಕಾಡುತ್ತಿದೆಯಾ? ಎದ್ದು ಆಸ್ಪತ್ರೆಗೆ ಹೋಗಲಾರದಷ್ಟು ತೊಂದರೆ ಆಗ್ತಿದೆಯಾ? ಹಾಗಿದ್ರೆ 108 ಆಂಬುಲೆನ್ಸ್ಗೆ ದಯವಿಟ್ಟು ಕಾಲ್ ಮಾಡಬೇಡಿ! ಅದರ ಬದಲು ನಿಮ್ಮ ಸ್ವಂತವಾಹನ, ಬಾಡಿಗೆ ವಾಹನ ಮಾಡಿಕೊಂಡು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಹೋಗಿ. ಯಾಕೆಂದ್ರೆ ನಿಮ್ಮ ಜೀವ ಉಳಿಯುವುದು ಎಲ್ಲಕ್ಕಿಂತ ಮುಖ್ಯ!
ಹೌದು ಇದು ಪಟ್ಟಣದ108 ಆಂಬುಲೆನ್ಸ್ನ ಸಮಸ್ಯೆ. ಪಟ್ಟಣದ ಹೋಬಳಿ ವ್ಯಾಪ್ತಿಯಲ್ಲಿ ಕರ‍್ಖಾನೆಗಳು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಉದ್ಯಮಗಳಿರುವ ಹೆಚ್ಚು ಒತ್ತಡದ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಆಂಬುಲೆನ್ಸ್ ಇಲ್ಲದೆ ಅಪಘಾತಗಳು, ಹೆರಿಗೆ ಸಮಸ್ಯೆ ಎದುರಾದಾಗ ಗಾಯಾಳುಗಳು, ರ‍್ಭಿಣಿಯರು ತೊಂದರೆಗೀಡಾಗಿದ್ದಾರೆ.
“ಅವಲಂಬನೆ”
ಪಟ್ಟಣದ 108 ಆಂಬುಲೆನ್ಸ್ ದುರಸ್ತಿಗಾಗಿ ಬಳ್ಳಾರಿಗೆ ತೆರಳಿದ ವಾಹನ ಬಾರದ ಹಿನ್ನೆಲೆಯಲ್ಲಿ, ಇಲ್ಲಿನ ತರ‍್ತು ಸೇವೆಗೆ ಸಿಬ್ಬಂದಿಗಳು, ಹ.ಬೊ.ಹಳ್ಳಿಯಿಂದ ಬರೋವರೆಗೂ ಕಾಯಬೇಕಿದೆ. ಇನ್ನೂ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೂ ವಾಹನ ಇಲ್ಲದ ಕಾರಣ, ಕಮಲಾಪುರದ ವಾಹನದ ಮೇಲೆ ಅವಲಂಬಿಸಿದೆ.
“ತರ‍್ತಾಗಲಿ”
ತರ‍್ತುಸೇವೆಗೆಂದು ಮೀಸಲಾದ ವಾಹನಗಳು ಇಲ್ಲದೆ, ರ‍್ಭಿಣಿಯರಿಗೆ, ಅಪಘಾತದ ಗಾಯಾಳುಗಳಿಗೆ ಬೇಕಾದ ವಾಹನ ಬೇಗನೆ ತರ‍್ತುಚಿಕಿತ್ಸೆ ಪಡೆದು ಮರಳಿ ಬರುವುದೆ ಎಂಬುದು ಜನತೆಯ ಒತ್ತಾಯ.