ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಂಡಿಹಟ್ಟಿ ಗ್ರಾಮದಲ್ಲಿ ನಡೆದ ಬಿಪಿಎಲ್ (ಬಂಡಿ ಹಟ್ಟಿ ಪ್ರೀಮಿಯರ್ ಲೀಗ್) ಫೈನಲ್ ಪಂದ್ಯಾವಳಿಯಲ್ಲಿ ಬಳ್ಳಾರಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಬಿ. ಶ್ರೀ ರಾಮುಲು ಅವರು ಭಾಗಿಯಾಗಿ ಯುವಕರು ಜೊತೆಯಲ್ಲಿ ಕೆಲ ಸಮಯ ಕಿಕ್ರೆಟ್ ವೀಕ್ಷಿಸಿದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಇಂತಹ ಪಂದ್ಯಾವಳಿಗಳಲ್ಲಿ ಕ್ರೀಡಾ ಸ್ಪೂರ್ತಿಯಿಂದ ಆಟವಾಡಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಆಟಗಾರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕೌಲ್ ಬಜಾರ್ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಗೋವಿಂದರಾಜುಲು ಮಂಡಲ ಅಧ್ಯಕ್ಷರಾದ ನಾಗರಾಜ್ ರೆಡ್ಡಿ ಬಿಜೆಪಿ ಪಕ್ಷದ ಮುಖಂಡರುಗಳು ಊರಿನ ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು.