35.8 C
Bellary
Saturday, April 26, 2025

Localpin

spot_img

1998ರ ತೀರ್ಪು ರದ್ದು ಮಾಡಿದ ಸುಪ್ರೀಂ

ಬೆಳಗಾಯಿತು ವಾರ್ತೆ |www.belagayithu.in

ದೆಹಲಿ, ಮಾ.4: ಇಂದು​ ಸುಪ್ರೀಂ ಕೋರ್ಟ್ ಮಹತ್ವ ತೀರ್ಪುವೊಂದನ್ನು ನೀಡಿದೆ. ಸಂಸದರು ಮತ್ತು ಶಾಸಕರು ಸೇರಿದಂತೆ ತಮ್ಮ ಮತಗಳಿಗೆ ಮತ್ತು ಸಂಸತ್ತಿನಲ್ಲಿ ಭಾಷಣಕ್ಕಾಗಿ ಹಣದ ಲಾಭವನ್ನು ಪಡೆದರೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಹೇಳಿದೆ. ಪಿವಿ ನರಸಿಂಹರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ 1998ರ ತೀರ್ಪನ್ನು ತೆಗೆದು ಹಾಕಿದೆ.

ಸದನದಲ್ಲಿ ಮತ ಅಥವಾ ಭಾಷಣಕ್ಕೆ ಲಂಚ ಪಡೆದ ಆರೋಪದ ಮೇಲೆ ಸಂಸದರು/ಶಾಸಕರನ್ನು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಶಾಸಕಾಂಗದ ಸದಸ್ಯರಿಂದ ಭ್ರಷ್ಟಾಚಾರ ನಡೆದರೆ ಅದು ಸಾರ್ವಜನಿಕರ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೂ ಅದು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ಏಳು ಪೀಠಗಳು ಹೇಳಿದೆ.

ಸಂಸತ್ ಅಥವಾ ಶಾಸಕಾಂಗದ ಕಾರ್ಯಚಟುವಟಿಕೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡಿದರೆ, ಅದು ಕಾನೂನಿನ ಚೌಕಟ್ಟಿನ ಒಳಗೆ ಬರದೆವಿರುವ ವಿನಾಯಿತಿಗಳನ್ನು ಅನುಭವಿಸುವ ವರ್ಗವನ್ನು ಸೃಷ್ಟಿಸಲು ಕಾರಣವಾಗುತ್ತದೆ ಎಂದು ಹೇಳಿದೆ. ಸಂಸತ್ತಿನ ಸವಲತ್ತುಗಳು ಮೂಲಭೂತವಾಗಿ ಸದನದ ಎಲ್ಲರಿಗೂ ಸಂಬಂಧಿಸಿರುವುದು ಎಂದು ಹೇಳಲಾಗಿದೆ. ರಾಜ್ಯಸಭೆಗೆ ಅಥವಾ ರಾಷ್ಟ್ರಪತಿ/ಉಪರಾಷ್ಟ್ರಪತಿ ಕಚೇರಿಗೆ ನಡೆಯುವ ಚುನಾವಣೆಗಳು ಸಂಸದೀಯ ಸವಲತ್ತುಗಳಿಗೆ ಅನ್ವಯವಾಗುವ ಸಾಂವಿಧಾನಿಕ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸುಪ್ರೀಂ ಕೋರ್ಟ್​​ ಹೇಳಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles