ಬೆಳಗಾಯಿತು ವಾರ್ತೆ|www.belagayithu.in
ನವದೆಹಲಿ ಹದಿನಾರು ವರ್ಷಗಳ ನಂತರ ಭಾರತದಲ್ಲಿ ಮೊದಲ ಬಾರಿಗೆ ಸೆನ್ಸಸ್ ನಡೆಯಲಿದೆ. 2027ರ ಸೆನ್ಸಸ್ಗೆ ಏಪ್ರಿಲ್ 1ರಂದು ಚಾಲನೆ ಸಿಗಲಿದೆ. ಇದು ಭಾರತದ ಮೊದಲ ಪೂರ್ಣ ಡಿಜಿಟಲ್ ಸೆನ್ಸಸ್ (Census 2027) ಆಗಿರಲಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಇದು ವಿಶ್ವದಲ್ಲೇ ಅತಿದೊಡ್ಡ ಗಣತಿ ಕಾರ್ಯವಾಗಲಿದೆ.
ಭಾರತದಲ್ಲಿ ಇಲ್ಲಿಯವರೆಗೆ 15 ಸೆನ್ಸಸ್ಗಳು ನಡೆದಿವೆ. ಸ್ವಾತಂತ್ರ್ಯದ ನಂತರ 7 ಸೆನ್ಸಸ್ ಆಗಿವೆ. ಕಳೆದ ಬಾರಿ ಸೆನ್ಸಸ್ ನಡೆದದ್ದು 2011ರಲ್ಲಿ. ಸಾಮಾನ್ಯವಾಗಿ ಪ್ರತೀ ದಶಕಕ್ಕೊಮ್ಮೆ ಈ ಕಾರ್ಯ ನಡೆಯುತ್ತದೆ. ಈ ಬಾರಿ ಸ್ವಲ್ಪ ವಿಳಂಬವಾಗಿದೆ. 2027ರಲ್ಲಿ ನಡೆಯಲಿರುವುದು 16ನೇ ಸೆನ್ಸಸ್ ಆಗಿರುತ್ತದೆ. ಪೂರ್ಣ ಡಿಜಿಟಲ್ ವೇದಿಕೆ ಬಳಸಿ ನಡೆಯುವ ಮೊದಲ ಜನಗಣತಿ ಇದು ಎನ್ನುವ ದಾಖಲೆ ಆಗಲಿದೆ.
ಎರಡು ಹಂತಗಳಲ್ಲಿ ಜನಗಣತಿ
ಜನಗಣತಿ ಹೇಗೆ ನಡೆಯುತ್ತದೆ?
ಈ ಡಿಜಿಟಲ್ ಗಣತಿ ಕಾರ್ಯದಲ್ಲಿ 30 ಲಕ್ಷದಷ್ಟು ಗಣತಿದಾರರು, ಮೇಲುಸ್ತುವಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗಣತಿಗೆಂದೇ ಮೊಬೈಲ್ ಆ್ಯಪ್ಗಳನ್ನು ಅಬಿವೃದ್ಧಿಪಡಿಸಲಾಗಿದೆ. ಗಣತಿದಾರರು ಈ ಆ್ಯಪ್ಗಳಲ್ಲಿ ದತ್ತಾಂಶವನ್ನು ತುಂಬಲಿದ್ದಾರೆ. ಹಾಗೆಯೇ, ಜನರು ಸ್ವಯಂ ಆಗಿ ತಮ್ಮ ದತ್ತಾಂಶ ನೀಡಲು ಆನ್ಲೈನ್ ಪೋರ್ಟಲ್ವೊಂದು ಇದೆ. ಇದು 16 ಭಾಷೆಗಳಲ್ಲಿರುತ್ತದೆ.
ಜನರು ತಮ್ಮ ಹಾಗೂ ತಮ್ಮ ಕುಟುಂಬದವರ ವಿವರವನ್ನು ಆನ್ಲೈನ್ನಲ್ಲೇ ತುಂಬಬಹುದು. ಆಗ ಒಂದು ಗಣತಿ ಐಡಿ ಸಿಗುತ್ತದೆ. ಮನೆಗಳಿಗೆ ಗಣತಿದಾರರು ಬಂದಾಗ ಈ ಐಡಿಯನ್ನು ಪರಿಶೀಲಿಸಿ, ಮಾಹಿತಿ ದೃಢಪಡಿಸುತ್ತಾರೆ.





