ಬೆಳಗಾಯಿತು ವಾರ್ತೆ
ಬಳ್ಳಾರಿ: ವಕೀಲ ವೃತ್ತಿಯನ್ನುವುದು ಒಂದು ಸವಾಲಿನ ವೃತ್ತಿಯಾಗಿದೆ. ಸಾರ್ವಜನಿಕರು ಒಂದಲ್ಲ ಒಂದು ಸಮಸ್ಯೆಗಳನ್ನು ಹೊತ್ತು ನಮ್ಮ ಬಳಿ ಬಂದಾಗ ಅವರಿಗೆ ನ್ಯಾಯವನ್ನು ಒದಗಿಸುವುದು ಒಂದು ಸವಾಲಿನ ಕೆಲಸವಾಗಿರುತ್ತದೆ ಎಂದು ವಕೀಲರಾದ ವೀರೇಶ್ ಅವರು ಹೇಳಿದರು.
ನಗರದ ಬಳ್ಳಾರಿ ಬೆಳಗಾಯಿತು ದಿನ ಪತ್ರಿಕಾ ಕಚೇರಿಯಲ್ಲಿ ಆರ್‌ಎಸ್ ಫೌಂಡೇಷನ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದರು.
ನಂತರ ಹಿರಿಯ ವಕೀಲರಾದ ವಿ. ವಿಜಯ ಕುಮಾರ್ ಅವರು ಮಾತನಾಡಿ, ವಕೀಲ ವೃತ್ತಿ ಎನ್ನುವುದು ಕೇವಲ ನ್ಯಾಯ ಒದಗಿಸುವುದು ಒಂದೇ ಅಲ್ಲ ಅದರ ಜತೆಗೆ ಸಮಾಜವನ್ನು ಉತ್ತಮ ರೀತಿಯಲ್ಲಿ ಸಾಗಿಸುವಲ್ಲಿ ವಕೀಲ ಪಾತ್ರ ಬಹುದೊಡ್ಡದು ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಬಳ್ಳಾರಿ ಬೆಳಗಾಯಿತು ದಿನ ಪತ್ರಿಕೆಯ ಸಹ ಸಂಪಾದಕರಾದ ವಿ. ಅನೂಪ್ ಕುಮಾರ್, ದಲಿತ ಮೈನಾರಿಟಿಯ ಜಿಲ್ಲಾಧ್ಯಕ್ಷ ಟಿಪ್ಪು ನವಾಜ್, ಆರ್ ಎಸ್ ಫೌಂಡೇಷನ್‌ನ ಸಂಸ್ಥಾಪಕ ಸದ್ದಾಮ್ ಸೇರಿದಂತೆ ಇತರರು ಹಾಜರಿದ್ದರು.