ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: 2023-24 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದಲ್ಲಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಂ.ಟೆಕ್.ಇನ್ ಪ್ರೊಡಕ್ಷನ್ ಮ್ಯಾನೆಜ್ ಮೆಂಟ್ ವಿಭಾಗದಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿನಿ ಕುಮಾರಿ. ಚೈತ್ರ .ಕೆ 1ನೇ ರ‍್ಯಾಂಕ್‌ನ್ನು ಪಡೆದಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಇಂತಹ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ಕುಮಾರಿ. ಚೈತ್ರ .ಕೆ ಹಾಗೂ ಅವರ ಸಾಧನೆಗೆ ಸ್ಪೂರ್ತಿ ನೀಡಿದ ಎಂ.ಟೆಕ್.ಇನ್ ಪ್ರೊಡಕ್ಷನ್ ಮ್ಯಾನೆಜ್ ಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ. ಚಿತ್ರಿಕಿ ತೋಟಪ್ಪ, ಮೆಕ್ಯಾನಿಕಲ್ ಇಂಜಿನೀರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಕೋರಿನಾಗರಾಜ, ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ. ಸವಿತಾ ಸೋನೊಳಿ, ಡೀನ್-ಅಕಾಡಮಿಕ್ ಡಾ. ಹೆಚ್.ಗಿರೀಶ, ಪ್ರಧ್ಯಾಪಕರು, ಸಿಬ್ಬಂಧಿವರ್ಗದವರು ಶುಭಕೋರಿದ್ದಾರೆ.