ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ವಿಮಾ ನೌಕರರ ಸಂಘ, ಎಲ್.ಐ.ಸಿ. ಶಾಖ ಘಟಕ 2 ಬಳ್ಳಾರಿಯಲ್ಲಿ (ಮೂಲ ಸಂಘಟನೆ AIIEA) ಯ ನಿಜವಾದ ಸಂಪ್ರದಾಯಕ್ಕೆ ತಕ್ಕಂತೆ ಸಾಮಾಜಿಕ ಬದ್ಧತೆಯನ್ನು ಪೂರೈಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಲಾಯಿತು. ಇದೇ ಸಂಧರ್ಭದಲ್ಲಿ ಸ.ಹಿ.ಪ್ರಾ.ಶಾಲೆ.ಸಿ.ಎಂ.ಬೀದಿ. ಕಮೇಲ ರಸ್ತೆ ಬಳ್ಳಾರಿ ಪೂರ್ವ ವಲಯದಲ್ಲಿ ಇರುವ ಶಾಲೆಗೆ ಸ್ವಯಂ ಪ್ರೇರಿತರಾಗಿ, ಮತ್ತು ವಿದ್ಯಾರ್ಥಿಗಳ ಉತ್ತಮ ಪ್ರಯೋಜನಕ್ಕಾಗಿ 43 ಇಂಚಿನ ಆಂಡ್ರಾಯ್ಡ್ ಫ್ಲಾಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು ಎಂದು ಡಿ.ವಿ. ಸೂರ್ಯ ನಾರಾಯಣ ಅವರು ಹೇಳಿದರು.
71ನೇ ವಯಸ್ಸಿನ ನಿವೃತ್ತ ಶಿಕ್ಷಕಿಯಾದ ಸುಜಾತ ಅವರು ತಮ್ಮ ಸೇವಾ ಅವಧಿ ಮುಗಿದ್ದಿದರು ಕೂಡ ಪ್ರತಿನಿತ್ಯವೂ ಶಾಲೆಗೆ ಬಂದು ಅವಿರತವಾಗಿ ಸೇವೆಸಲ್ಲಿಸುತ್ತಿರುವುದನ್ನು ಗುರುತಿಸಿ ಸಂಘಟನೆ ಪರವಾಗಿ ಎಲ್ಲ ಮಹಿಳೆಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಖದಿಕರಿಗಳಾದ ಸಂಪತ್ ಕುಮಾರ್, ಸಹ ಶಾಖದಿಗರಿಗಳಾದ ವೆಂಕಟ ರಾಮುಡು, ಸಂಘಟನೆಯ ಕಾರ್ಯದರ್ಶಿ ಡಿ ವಿ.ಸೂರ್ಯ ನಾರಾಯಣ, ಸಂಯೋಜಕರಾದ ಲವಕುಮಾರ್, ಖಜಾಂಚಿ ವಿಗ್ನೇಶ್, ಶಾಂತಕುಮಾರಿ, ವಿ.ರವಿಕುಮಾರ್, ಶಾಲೆಯ ಮುಖ್ಯೋಪಾಧ್ಯಾಯರು ತಿಪ್ಪೇಸ್ವಾಮಿ ಹಾಗೂ ಶಾಖೆಯ ಎಲ್ಲಾ ವರ್ಗದ ಮಹಿಳಾ ಉದ್ಯೋಗಿಗಳು ಉಪಸ್ಥಿತರಿದ್ದರು.