ಪಿಸ್ತಾ ಹೌಸ್ ಹೋಟೆಲ್ ಸಿಬ್ಬಂದಿಗಳ ಮೇಲೆ ಪುಂಡರಿಂದ ಹಲ್ಲೆ

ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಪಿಸ್ತಾ ಹೌಸ್ ಹೋಟೆಲ್ ನಲ್ಲಿ ಸೋಮವಾರ ತಡರಾತ್ರಿ ಎಂಟು ಜನರ ಗುಂಪೊಂದು ಹೋಟೆಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿದೆ.
ತಡರಾತ್ರಿ ಹೋಟೆಲ್‌ಗೆ ಬಂದ ಗುಂಪೊಂದು ಮಂಡಿ ಬಿರಿಯಾನಿ ಕೇಳಿದ್ದು, ಆ ಸಮಯದಲ್ಲಿ ಲಭ್ಯವಿಲ್ಲವೆಂದು ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಸೆಕ್ಯುರಿಟಿ ಗಾರ್ಡ್‌ಗೆ ಗೇಟ್ ತೆರೆಯುವಂತೆ ಬೆದರಿಕೆ ಹಾಕಿ, ಬಲವಂತವಾಗಿ ಒಳನುಗ್ಗಿದ್ದಾರೆ.
ಅನಂತರ ಅವರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಸೆಕ್ಯುರಿಟಿ ಗಾರ್ಡ್‌ಗೆ ತಲೆಗೆ ಹೊಡೆದ ಪರಿಣಾಮ ಗಾಯಗಳಾಗಿವೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles