ಏ. 01ರಿಂದ ಜನಗಣತಿ ಪ್ರಾರಂಭ : ಮೊದಲ ಡಿಜಿಟಲ್ ಗಣತಿಗೆ ಜಿಲ್ಲಾಡಳಿತ ಸಜ್ಜು


ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ:
ಭಾರತದಲ್ಲಿ 1872ರಿಂದ ಆರಂಭವಾದ ಜನಗಣತಿ ಪ್ರಕ್ರಿಯೆಯ ಮುಂದುವರಿಕೆಯಾಗಿ, 2027ರ ಜನಗಣತಿ 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯಾನಂತರದ 8ನೇ ಜನಗಣತಿಯಾಗಿ ಗುರುತಿಸಿಕೊಳ್ಳಲಿದೆ. ಈ ಬಾರಿ ಜನಗಣತಿ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಗಣತಿದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ CMMS ಮೊಬೈಲ್ ಅಪ್ಲಿಕೇಶನ್ ಮೂಲಕ ದತ್ತಾಂಶ ಸಂಗ್ರಹಣೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ತಿಳಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಜನಗಣತಿ 2027 ಅನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತವಾಗಿ ಮನೆ ಪಟ್ಟಿ ಮತ್ತು ಗೃಹ ಜನಗಣತಿ ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯಲಿದ್ದು, ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣನೆಗೆ ಅವಕಾಶ ಕಲ್ಪಿಸಲಾಗಿದೆ. ಎರಡನೇ ಹಂತವಾಗಿ ಜನಸಂಖ್ಯೆ ಗಣನೆ 2027ರ ಫೆಬ್ರವರಿಯಲ್ಲಿ ನಡೆಯಲಿದೆ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಪೂರ್ವ ತಯಾರಿ:
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 39 ವಾರ್ಡ್‌ಗಳಿಗೆ ಜನಗಣತಿ ಪೂರ್ವ ತಯಾರಿಗಳು ಚುರುಕುಗೊಂಡಿವೆ. ಒಟ್ಟು 5 ಚಾರ್ಜ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ವಿವಿಧ ವಲಯಗಳ ಆಯುಕ್ತರು ಹಾಗೂ ಕಂದಾಯ ಅಧಿಕಾರಿಗಳಿಗೆ ವಾರ್ಡ್‌ಗಳ ಜವಾಬ್ದಾರಿ ಹಂಚಲಾಗಿದೆ.
ಜನಗಣತಿ ಕಾರ್ಯಕ್ಕೆ 14 ಫೀಲ್ಡ್ ಟ್ರೈನರ್‌ಗಳನ್ನು ನಿಯೋಜಿಸಲಾಗಿದ್ದು, 160ರಿಂದ 200 ಮನೆಗಳು ಹಾಗೂ 800ರಿಂದ 1000 ಜನರನ್ನು ಒಳಗೊಂಡ ಮನೆ ಪಟ್ಟಿ ಬ್ಲಾಕ್‌ಗಳು (HLB) ರಚಿಸಲಾಗಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಸುಮಾರು 673 HLBಗಳನ್ನು ಗುರುತಿಸಲಾಗಿದ್ದು, 10% ಮೀಸಲಾತಿ ಸೇರಿಸಿ 740 ಗಣತಿದಾರರು ಮತ್ತು 123 ಮೇಲ್ವಿಚಾರಕರನ್ನು ಸೇರಿಸಿ ಒಟ್ಟು 863 ಸಿಬ್ಬಂದಿಯನ್ನು ನೇಮಕ ಮಾಡಿ CMMS ಪೋರ್ಟಲ್‌ನಲ್ಲಿ ವಿವರಗಳನ್ನು ಅಪ್ಲೋಡ್ ಮಾಡಲಾಗುತ್ತದೆ.
ಇದಲ್ಲದೆ, ಪ್ರತಿ ಚಾರ್ಜ್ ಅಧಿಕಾರಿಗೆ ಒಬ್ಬ ತಾಂತ್ರಿಕ ಸಹಾಯಕ ಹಾಗೂ ಮುಖ್ಯ ಕಚೇರಿಗೆ ಇಬ್ಬರು ತಾಂತ್ರಿಕ ಸಹಾಯಕರನ್ನು ಸೇರಿಸಿ ಒಟ್ಟು 7 ತಾಂತ್ರಿಕ ಸಹಾಯಕರು ಮತ್ತು ಒಬ್ಬ ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)ರನ್ನು ಟೆಂಡರ್ ಪ್ರಕ್ರಿಯೆ ಮೂಲಕ ನೇಮಕ ಮಾಡಲಾಗಿದೆ ಎಂದರು.

ಚಾರ್ಜ್ ಅಧಿಕಾರಿಗಳು, ವಿಷಯ ನಿರ್ವಾಹಕರು, ತಾಂತ್ರಿಕ ಸಹಾಯಕರು ಹಾಗೂ MTS ಸಿಬ್ಬಂದಿಗೆ ಮಾರ್ಚ್ 9ರಿಂದ 11ರವರೆಗೆ ಮೂರು ದಿನಗಳ ತರಬೇತಿ ಯಶಸ್ವಿಯಾಗಿ ನಡೆಸಲಾಗಿದೆ. ಜನಗಣತಿ 2027ರ ಯಶಸ್ವಿ ನಿರ್ವಹಣೆಗೆ ಬಳ್ಳಾರಿ ಮಹಾನಗರ ಪಾಲಿಕೆ ಸಂಪೂರ್ಣ ಸಜ್ಜಾಗಿದ್ದು, ಡಿಜಿಟಲ್ ಗಣತಿಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದರು

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಎಸ್ ಮಂಜುನಾಥ್ ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles