ಬೆಳಗಾಯಿತು ವಾರ್ತೆ| www.belagayithu.in
ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಟೋಲ್ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿದೆ.
ಏಪ್ರಿಲ್ 10ರಿಂದ ಟೋಲ್ ಶುಲ್ಕವನ್ನು ಇನ್ನು ಮುಂದೆ ಯುಪಿಐ ಅಥವಾ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಪಾವತಿಸಬೇಕು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಸೂಚಿಸಿದೆ.
ಸವಾರರಿಗೆ ಸಲಹೆಗಳು…
* ಯುಪಿಐ ಸೇವೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
* ನೀವು ಬಳಕೆ ಮಾಡುತ್ತಿರುವ ವಾಹನದ ಫಾಸ್ಟ್‌ಟ್ಯಾಗ್ ಸಕ್ರಿಯವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
* ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ ಹಣ ಇರುವಂತೆ ನೋಡಿಕೊಳ್ಳಿ.
ನಗದು ಪಾವತಿಗೆ ಅವಕಾಶ ಇರುವುದಿಲ್ಲ. ಹಾಗೂ ಐಡಿ ಕಾರ್ಡುಗಳನ್ನು ತೋರಿಸಿ ಟೋಲ್ ದಾಟುವ ಪದ್ಧತಿಗೂ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ಪ್ರಾಧಿಕಾರ ತಿಳಿಸಿದೆ.





