37.5 C
Bellary
Friday, April 26, 2024

Localpin

spot_img

ಮುಂಬೈ-ಹೊಸಪೇಟೆ ರೈಲು ಭಾಗಶಃ ರದ್ದು

ಬೆಳಗಾಯಿತು ವಾರ್ತೆ |www.belagayithu.in
ಹುಬ್ಬಳ್ಳಿ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪಾದಚಾರಿ ಮೇಲ್ಸೇತುವೆಯ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಕೊಪ್ಪಳ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಈ ಭಾಗದ ರೈಲುಗಳು ರದ್ದು
ಏಪ್ರಿಲ್ 5, 2024ರಂದು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11139 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ – ಹೊಸಪೇಟೆ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕೊಪ್ಪಳ ನಿಲ್ದಾಣದ ವರಗೆ ಮಾತ್ರ ಸಂಚರಿಸಲಿದೆ. ಹೀಗಾಗಿ ಈ ರೈಲು ಕೊಪ್ಪಳ – ಹೊಸಪೇಟೆ ನಿಲ್ದಾಣಗಳ ನಡುವೆ ರದ್ದು ಮಾಡಲಾಗಿದೆ.
ಏಪ್ರಿಲ್ 6, 2024 ರಂದು ರೈಲು ಸಂಖ್ಯೆ 11140 ಹೊಸಪೇಟೆ – ಸಿಎಸ್ಎಂಟಿ ಮುಂಬೈ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಹೊಸಪೇಟೆ ನಿಲ್ದಾಣದ ಬದಲು ಕೊಪ್ಪಳ ನಿಲ್ದಾಣದಿಂದ ಪ್ರಾರಂಭವಾಗಲಿದೆ. ಈ ರೈಲನ್ನು ಹೊಸಪೇಟೆ – ಕೊಪ್ಪಳ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸಿ.ಪಿ.ಆರ್.ಒ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles