25 C
Bellary
Saturday, March 14, 2026

Localpin

spot_img
Home Arts ದರ್ಶನ್ ಹೆಚ್ಚು ಪ್ರೀತಿಯಿಂದ ನಟಿಸಿದ ಸಿನಿಮಾ ಡೆವಿಲ್..

ದರ್ಶನ್ ಹೆಚ್ಚು ಪ್ರೀತಿಯಿಂದ ನಟಿಸಿದ ಸಿನಿಮಾ ಡೆವಿಲ್..

0
8

ಡಿ.ಬಾಸ್ ದರ್ಶನ್ ಅತಿಹೆಚ್ಚು ಪ್ರೀತಿಯಿಂದ ನಟಿಸಿದ ಸಿನಿಮಾ ಡೆವಿಲ್. ಪ್ರಕಾಶ್ ವೀರ್ 2018 ರಲ್ಲಿ ಡೆವಿಲ್ ಕಥೆ ದರ್ಶನ್ ಗೆ ಹೇಳಿದ್ದರು. ಆ ದಿನದಿಂದಲೂ ಪ್ರಕಾಶ್ ಸಿಕ್ಕಾಗೆಲ್ಲ, ಯಾವಾಗ ಸಿನಿಮಾ ಶುರು ಮಾಡುತ್ತೀರಾ ? ಎಂದು ದರ್ಶನ್ ಕೇಳುತ್ತಿದ್ದರು. ಪೈನಲಿ ಡಿಸೆಂಬರ್ 11 ಕ್ಕೆ ದರ್ಶನ್ ಇಷ್ಟಪಟ್ಟು ನಟಿಸಿರುವ ಸಿನಿಮಾ ಡೆವಿಲ್ ರಿಲೀಸ್ ಆಗಲಿದೆ.
2023 ರಲ್ಲಿ ಡೆವಿಲ್ ಶುರುವಾಗಿತ್ತು. ದರ್ಶನ್ ಬಾಳಿನಲ್ಲಿ ನಡೆದ ಕಹಿ ಘಟನೆಯ ನಂತರವು ಅಷ್ಟೇ ಆಸಕ್ತಿ ,ಪ್ರೀತಿಯಿಂದ ಡೆವಿಲ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ, ಎಂದು ನಿರ್ದೇಶಕ ಪ್ರಕಾಶ್ ವೀರ ಹೇಳುತ್ತಾರೆ.
ದರ್ಶನ್ ಸೆಟ್ ನಲ್ಲಿ ಎಲ್ಲಿಯೂ ತಾವು ಅನುಭವಿಸುತ್ತಿರುವ ಬೆನ್ನು ನೋವನ್ನು ಹೇಳಿಕೊಳ್ಳದೇ ಸೆಟ್ ನಲ್ಲಿ ಡೆವಿಲ್ ಪಾತ್ರವನ್ನು ಚೆನ್ನಾಗಿ ಮುಗಿಸಿಕೊಟ್ಟಿದ್ದಾರೆ. ಅವರ ಬಾಳಿನಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಏನನ್ನೂ ಹೇಳಿಕೊಳ್ಳುತ್ತಿತಲಿಲ್ಲ.. ಅವರಿಗಿರುವ ಸಿನಿಮಾ ಪ್ರೀತಿಯ ಮುಂದೆ ಬೇರೆ ಏನನ್ನು ತೋರಿಸದೇ ಸಿನಿಮಾಕ್ಕಾಗಿ ಬದ್ಧತೆ ತೋರಿಸಿದ್ದಾರೆ,ಡಿ.ಬಾಸ್ ದರ್ಶನ್ ಎಂದು ತಿಳಿಸಿದ ಪ್ರಕಾಶ್ ವೀರ್ ಮಾದ್ಯಮದ ಮುಂದೆ ಹೇಳಿದ್ದಾರೆ.
“ನಾನು ಬರ್ತಿದಿನಿ ಚಿನ್ನಾ”, ಇದು ಸಿನಿಮಾ ಡೈಲಾಗ್.. ಟ್ರೇಲರ್ ನಲ್ಲಿ ಕೂಡ ಬಳಸಿಕೊಳ್ಳಲಾಗಿದೆ. ಈಗಾಗಲೇ ದರ್ಶನ್ ಬಳಿ ಡೆವಿಲ್ ಸಿನಿಮಾ ಬಗ್ಗೆ ಚರ್ಚಿಸಿದ್ದೇನೆ. ಡೆವಿಲ್ ಸಿನಿಮಾದ ಡೈಲಾಗ್ ಪೋರ್ಷನ್ ಮುಗಿಸುತ್ತಿರುವಾಗಲೇ ದರ್ಶನ್ ಈ ಸಿನಿಮಾವನ್ನು ಕನ್ನಡಿಗರು ತುಂಬಾ ಎಂಜಾಯ್, ಮಾಡುತ್ತಾರೆ, ಎನ್ನುವ ಭರವಸೆ ನೀಡಿದ್ದರು, ಎಂದು ಪ್ರಕಾಶ್ ವೀರ್ ದರ್ಶನ್ ಬಗ್ಗೆ ಅಭಿಮಾನದಿಂದ ಹೇಳಿದ್ದಾರೆ.
ಜಯಮಾತಾ ಕಂಬೈನ್ಸ್ ಸಿನಿಮಾ ರಿಲೀಸ್ ಮುನ್ನ ಒರಾಯನ್ ಮಾಲ್ ನಲ್ಲಿ ಪ್ರೆಸ್ ಮೀಟ್ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನಟ ಅಚ್ಯುತ್ ಕುಮಾರ್ ಮಾತನಾಡಿ, ಡೆವಿಲ್ ಸಿನಿಮಾ ಸೆಟ್ ತುಂಬಾ ಪ್ರೊಪೆಷನಲ್ ಟೀಮ್ ಹೊಂದಿತ್ತು. ಪ್ರಕಾಶ್ ವೀರ್ ತುಂಬಾ ಶಾಂತವಾಗಿ ನಮ್ಮ ಅಭಿನಯವನ್ನು ಹೊರತರುತ್ತಿದ್ದರು. ದರ್ಶನ್ ಜೊತೆ ನನಗೆ 4 ನೇ ಸಿನಿಮಾ. ದರ್ಶನ್ ಅಭಿನಯ ಹಾಗೂ ಸಿನಿಮಾದ ಬಗ್ಗೆ ಇರುವ ಕಮಿಟ್ ಮೆಂಟ್ ಎಲ್ಲರಿಗೂ ಮಾದರಿ, ಎಂದು ಡೆವಿಲ್ ಸಿನಿಮಾ ಬಗ್ಗೆ ಮಾತನಾಡಿದರು.
ಇದೇ ಡಿಸೆಂಬರ್ 5 ರಂದು ಟ್ರೇಲರ್ ರಿಲೀಸ್ ಆಗಲಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ತಸ್ವಿನಿ ವೀರ್, ನಾಯಕಿ ನಟಿಯರಾದ ರಚನಾ, ಶರ್ಮಿಳಾ ಮಾಂಡ್ರೆ, ಶೋಭರಾಜ್ ಭಾಗವಹಿಸಿದ್ದರು. ಡೆವಿಲ್ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಮೂಲಕ ಡಿಸೆಂಬರ್ 11 ರಂದು ಬೆಳಿಗ್ಗೆ 6 ಗಂಟೆಗೆ ರಿಲೀಸ್ ಆಗಲಿದೆ.

Previous articleನೀರು, ಒಳ ಚರಂಡಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು
Next articleಪೋಕ್ಸೊ:ವಿಚಾರಣೆಗೆ ಸುಪ್ರೀಂ ತಡೆ