‘ಜೈ ಹನುಮಾನ್‌’ ಚಿತ್ರಕ್ಕೆ ಮಲಯಾಳಂ ನಟಿ ಮಮಿತಾ ಬೈಜು ಎಂಟ್ರಿ?


ರಿಷಬ್‌ ಶೆಟ್ಟಿ ಜೊತೆ ತೆರೆ ಹಂಚಿಕೊಳ್ಳಲಿರುವ ನಟಿ; ಪಾತ್ರದ ಚಿತ್ರೀಕರಣ ಆರಂಭ ಎನ್ನಲಾಗುತ್ತಿದೆ
ಬೆಳಗಾಯಿತು ವಾರ್ತೆ
ಬೆಂಗಳೂರು: ನಿರ್ದೇಶಕ ಪ್ರಶಾಂತ್‌ ವರ್ಮಾ ಹಾಗೂ ನಟ ರಿಷಬ್‌ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ಜೈ ಹನುಮಾನ್‌’ಗೆ ಮಲಯಾಳಂ ನಟಿ ಮಮಿತಾ ಬೈಜು ಸೇರ್ಪಡೆಯಾಗಿದ್ದಾರೆ ಎಂಬ ವರದಿಗಳು ಚಿತ್ರರಂಗದಲ್ಲಿ ಕುತೂಹಲ ಮೂಡಿಸಿವೆ.
ರಿಷಬ್‌ ಶೆಟ್ಟಿ ಅವರಿಗೆ ಜತೆಯಾಗಿ ಮಮಿತಾ ಬೈಜು ಕಾಣಿಸಿಕೊಳ್ಳಲಿದ್ದು, ಈಗಾಗಲೇ ಅವರ ಪಾತ್ರದ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗಿದೆ. ಆದರೆ, ಈ ಕುರಿತು ನಟಿ ಅಥವಾ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಮಿತಾ ಬೈಜು, ಈಗ ಇತರ ಭಾಷೆಗಳ ಚಿತ್ರಗಳಲ್ಲಿಯೂ ನಟಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮಿಳು ನಟ ವಿಜಯ್‌ ಅವರ ‘ಜನ ನಾಯಗನ್‌’, ಸೂರ್ಯ ಅಭಿನಯದ ‘ವಿಶ್ವನಾಥನ್‌ ಆ್ಯಂಡ್‌ ಸನ್ಸ್‌’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ನಿವಿನ್‌ ಪೌಲಿ ಅಭಿನಯದ ‘ಬೆಥ್ಲಹೆಮ್‌ ಕುಟುಂಬ ಯುನಿಟ್‌’ ಚಿತ್ರವೂ ಅವರ ವೃತ್ತಿಜೀವನದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles