ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ದಸರಾ ಶರನ್ನವರಾತ್ರಿ ಮಹೋತ್ಸವದ ಎರಡನೇ ದಿನದ ಅಂಗವಾಗಿ ಸೋಮವಾರ ಅಮ್ಮನವರಿಗೆ ಬ್ರಹ್ಮಚಾರಿಣಿ ದೇವಿ ಅಲಂಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಅಮ್ಮನವರನ್ನು ವಿಶೇಷವಾಗಿ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬ್ರಹ್ಮಚಾರಿಣಿ ದೇವಿಯ ಅಲಂಕಾರದಲ್ಲಿ ಕಂಗೊಳಿಸಿದ ಅಮ್ಮನವರ ದರ್ಶನ ಪಡೆದು ಭಕ್ತರು ಭಕ್ತಿಭಾವ ಮೆರೆದರು. ಶರನ್ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.