ಬೆಳಗಾಯಿತು ವಾರ್ತೆ |www.belagayithu.in
ಕೊಪ್ಪಳ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಮತೀಯ ಗಲಭೆ ಭಾರತದಲ್ಲಿ ನಡೆಯದೆ ದೇಶವು ಶಾಂತಿಯುವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರಣ ಎಂದು ಬಿಜೆಪಿ ಮುಖಂಡ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಹೇಳಿದರು.
ನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ರೆಡ್ಡಿ, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದರೆ ಭಾರತ ಅತ್ಯಂತ ಅಭಿವೃದ್ಧಿ ರಾಷ್ಟ್ರ ಎನಿಸಿಕೊಂಡು ಅಮೆರಿಕವನ್ನೂ ಹಿಂದಕ್ಕಿಲಿದೆ ಎಂದು ಹೇಳಿದರು.