40.9 C
Bellary
Monday, April 22, 2024

Localpin

spot_img

ಮೈ ಕೊರೆವ ಚಳಿಯಲ್ಲಿ ಆಮರಣಾಂತ ಉಪವಾಸ 

ಬೆಳಗಾಯಿತು ವಾರ್ತೆ |www.belagayithu.in
ಲಡಾಕ್‌: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ರಾಜ್ಯ ಸ್ಥಾನಮಾನ ಒದಗಿಸಬೇಕು ಮತ್ತು ಆರನೇ ಶೆಡ್ಯೂಲ್ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಖ್ಯಾತ ಶಿಕ್ಷಣ ಸುಧಾರಣಾವಾದಿ, ಎಂಜಿನಿಯರ್‌ ಸೋನಮ್ ವಾಂಗ್ಚುಕ್ ಮಾರ್ಚ್ 6ರಿಂದ ಲೇಹ್‌ನ ಎನ್‌ಡಿಎಸ್ ಸ್ಟೇಡಿಯಂನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇವರಿಗೆ ಬೆಂಬಲ ನೀಡಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಮಾರ್ಚ್ 20ರಂದು ಅರ್ಧ ದಿನದ ಸಾರ್ವತ್ರಿಕ ಮುಷ್ಕರ ನಡೆಸುತ್ತಿದೆ. ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ʼ3 ಈಡಿಯಟ್ಸ್‌ʼನ ಆಮೀರ್ ಖಾನ್ ಪಾತ್ರ ಫುನ್ಸುಖ್ ವಾಂಗ್ಡುಗೆ ಸೋನಮ್ ವಾಂಗ್ಚುಕ್ ಸ್ಫೂರ್ತಿಯಾಗಿದ್ದರು.
ಮೈ ಕೊರೆವ ಚಳಿ
ಲೇಹ್‌ನಲ್ಲಿ ಈಗ ಮೈ ಕೊರೆವ ಚಳಿ ಇದೆ. ಕೆಲವೊಮ್ಮೆ ಇಲ್ಲಿ ರಾತ್ರಿಯ ತಾಪಮಾನವು ಮೈನಸ್-16 ಡಿಗ್ರಿ ಸೆಲ್ಸಿಯಸ್‌ವರರೆಗೂ ಕುಸಿಯುತ್ತದೆ. ಆದರೂ ಸೋನಮ್ ಇದ್ಯಾವುದಕ್ಕೂ ಕುಗ್ಗದೆ ತಮ್ಮ ಬೆಂಬಲಿಗರೊಂದಿಗೆ ಸತ್ಯಾಗ್ರಹ ಮುಂದುವರಿಸಿದ್ದಾರೆ. ಮಂಗಳವಾರ (ಮಾರ್ಚ್‌ 19) ಈ ಬಗ್ಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗರೊಂದಿಗೆ ಶೀಘ್ರದಲ್ಲೇ ಬೃಹತ್‌ ಮೆರವಣಿಗೆ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles