ಬೆಳಗಾಯಿತು ವಾರ್ತೆ
ಬಳ್ಳಾರಿ: ರಸ್ತೆಯಲ್ಲಿ ಪಾರ್ಶ್ವವಾಯು ಹೊಡೆದ ವ್ಯಕ್ತಿಯನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಒಯ್ಯುತ್ತಿರುವ ಮತ್ತು ಆರೈಕೆ ಮಾಡುತ್ತಿರುವ ಸಚಿವ ಶ್ರೀರಾಮುಲು ರವರ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ಸಕ್ಕತ್ ವೈರಲ್ ಆಗ್ತಾಯಿದೆ.
ಘಟನೆಯ ವಿವರ: ಬಳ್ಳಾರಿಯ ಎಸ್ಪಿ ವೃತ್ತದಿಂದ ಸಿರುಗುಪ್ಪ ರಸ್ತೆಯ ಕಡೆ ಪ್ರಯಾಣಿಸುತ್ತಿರುವಾಗ ವ್ಯಕ್ತಿಯೋರ್ವನಿಗೆ ಪಾರ್ಶ್ವವಾಯು ಹೊಡೆದ ದೃಶ್ಯವನ್ನು ಕಂಡ ಮಾಜಿ ಸಚಿವ ಶ್ರೀರಾಮುಲು ರವರು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ, ಖುದ್ದು ತಮ್ಮ ಎರಡು ಕೈಗಳಿಂದ ವ್ಯಕ್ತಿಯನ್ನು ಎತ್ತಿಕೊಂಡು ರಸ್ತೆಯ ಪಕ್ಕದಲ್ಲಿರುವ ಸುರಕ್ಷಿತ ಸ್ಥಳಕ್ಕೆ ತಂದು ಮಲಗಿಸಿ ಸಮಯಪ್ರಜ್ಞೆಯಿಂದ ತುರ್ತು ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೆಲ ನಿಮೀಷಗಳ ನಂತರ ವ್ಯಕ್ತಿ ಸಹಜ ಸ್ಥಿತಿಗೆ ತಲುಪಿದ ಮೇಲೆ ಸಮೀಪದ ಆಸ್ಪತ್ರೆಗೆ ತೆರಳಲು ವ್ಯವಸ್ಥೆ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಸಚಿವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.