ಬೆಳಗಾಯಿತು ವಾರ್ತೆ| www.belagayithu.in
ಕುರುಗೋಡು: ತಾಲ್ಲೂಕಿನ ಪುರುಸಭೆಯಲ್ಲಿ ಈ ಹಿಂದೆ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಮಂಜುನಾಥ ಅವರನ್ನು ನೇಮಕ ಮಾಡಲಾಗಿದ್ದು, ಶುಕ್ರವಾರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಒಂದನೇ ವಾರ್ಡಿನ ಕೌನ್ಸಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಅವರ ನೇಮಕಾತಿಯಿಂದ ಸ್ಥಳೀಯರಲ್ಲಿ ಸಂತಸ ಮೂಡಿದೆ. ವಿಶೇಷವಾಗಿ ಅವರು ಕನ್ನಡದ ಖ್ಯಾತ ನಟ ಡಾ.ರಾಜಕುಮಾರ್ ಅವರ ಕಟ್ಟ ಅಭಿಮಾನಿಯಾಗಿದ್ದು, ರಾಜ್ ಕುಟುಂಬದ ವಿಶೇಷ ದಿನಗಳನ್ನು ಆಚರಿಸುವುದು, ಅನ್ನಸಂತರ್ಪಣೆ ಸೇರಿದಂತೆ ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಸಾಮಾಜಿಕ ಸೇವೆಯ ಮೂಲಕ ಜನಮನ ಗೆದ್ದಿರುವ ಮಂಜುನಾಥ ಅವರು ಇದೀಗ ಪುರುಸಭೆ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ. ಈ ಹಿನ್ನೆಲೆ ಪಟ್ಟಣದ ಅನೇಕ ಗಣ್ಯರು, ಗುರುಹಿರಿಯರು ಹಾಗೂ ಸ್ನೇಹಿತರು ಅವರಿಗೆ ಶುಭಾಶಯ ಕೋರಿದ್ದಾರೆ





