ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದ ಹತ್ತಿರದ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಹತ್ತಿರ ರಾಯಚೂರಿನ ಜಿಲ್ಲೆಯ ಮಾನ್ವಿ ತಾಲೂಕಿನ ನೃತ್ಯ ಪಟು ಓಂಕಾರ್ ಅವರು ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪವರ್ ಚಿತ್ರದ ಧಮ್ ಪವರೇ ಎಂಬ ಕವರ್ ಸಾಂಗ್ ಗೆ ಬಾಲ ಪ್ರತಿಭೆ ಪ್ರೀತಂ ಮುಖ್ಯ ಭೂಮಿಕೆಯಲ್ಲಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.
ರಾಯಚೂರಿನ ಜಿಲ್ಲೆಯ ಮಾನ್ವಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೂರು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಬಾಲ ಪ್ರತಿಭೆ ಪ್ರೀತಂ ಅವರು ಮಾತನಾಡಿ ನಾನು ಅಪ್ಪಟ ಅಪ್ಪು ಅವರ ಅಭಿಮಾನಿಯಾಗಿದ್ದೇನೆ. ಪುನೀತ್ ರಾಜ್ ಕುಮಾರ್ ಅವರ ಪವರ್ ಚಿತ್ರದ ಧಮ್ ಪವರೇ ಎಂಬ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅಂಜಿನಪ್ಪ, ಸದ್ದಾಂ ಸೇರಿದಂತೆ ನೃತ್ಯ ನಿರ್ದೇಶನ ತಂಡದ ಇತರೆ ಸದಸ್ಯರು ಜೊತೆಯಲ್ಲಿದ್ದರು.