ಶರಣಪ್ಪ ಮಟ್ಟೂರ್ ಪರ ಕಾಂಗ್ರೆಸ್ ಮುಖಂಡರಿಂದ ಮತಯಾಚನೆ

ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ-2026ರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶರಣಪ್ಪ ಮಟ್ಟೂರ್ ಅವರ ಪರವಾಗಿ ಶನಿವಾರ ಬಳ್ಳಾರಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮುಖಂಡರು ಮತಯಾಚನೆ ನಡೆಸಿದರು.
ಬೆಳಿಗ್ಗೆ 9.30 ಗಂಟೆಯಿಂದ ನಗರದ ಚೈತನ್ಯ ಪಿ.ಯು. ಕಾಲೇಜು, ಸರಳಾದೇವಿ ಕಾಲೇಜು, ಸರ್ಕಾರಿ ನಿರ್ವಹಣಾ ಹಾಗೂ ವಾಣಿಜ್ಯ ಕಾಲೇಜು ಹಾಗೂ ಸರ್ಕಾರಿ ಫಸ್ಟ್ ಗ್ರೇಡ್ ಬಾಲಕಿಯರ ಕಾಲೇಜಿಗೆ ಭೇಟಿ ನೀಡಿದ ಮುಖಂಡರು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಮತದಾರರನ್ನು ಭೇಟಿಯಾಗಿ ಶರಣಪ್ಪ ಮಟ್ಟೂರ್ ಅವರ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಿಕ್ಷಕರ ಚುನಾವಣೆಯ ಬಳ್ಳಾರಿ ವೀಕ್ಷಕರಾದ ಜೆ.ಎಸ್. ಆಂಜನೇಯುಲು, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಡಿಸಿಸಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ, ಡಿಸಿಸಿ ಉಪಾಧ್ಯಕ್ಷ ಕೆ. ಶ್ರೀನಿವಾಸಲು, ಮಾಜಿ ಎಪಿಎಂಸಿ ಅಧ್ಯಕ್ಷ ಸರಗು ನಾಗರಾಜು, ಡಿಸಿಸಿ ಕಾರ್ಯದರ್ಶಿ ಶೋಭ ಕಲಿಂಗ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಶಿಕ್ಷಕರ ವಿಭಾಗದ ಅಧ್ಯಕ್ಷ ಅಖೀಲ್ ಅಹಮ್ಮದ್, ಸೇವಾದಳ ಜಿಲ್ಲಾಧ್ಯಕ್ಷ ಅತಾವುಲ್ಲಾ ಸೇರಿದಂತೆ ಕೊಟ್ಟಾಲ್ ರಘು, ಮಲ್ಲಿಶ್ವರಿ, ಲಕ್ಷ್ಮೀನಾರಾಯಣ, ಸಂತೋಷ್ ಸ್ವಾಮಿ, ಅಖಿಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles