ಬೆಳಗಾಯಿತು ವಾರ್ತೆ | www.belagayitu.in
ಬೆಂಗಳೂರು: ರಾಜ್ಯದಲ್ಲಿ ನಿಷೇಧಿತ ಕಲರ್ ಬಳಕೆ ಮಾಡಿಕೊಂಡು ತಯಾರಿಸುವ ಕಾಟನ್ ಕ್ಯಾಂಡಿ ಹಾಗೂ ಕೃತಕ ಬಣ್ಣ ಬಳಕೆ ಮಾಡಿಕೊಂಡುವ ತಯಾರಿಸುವ ಗೋಬಿ ಮಂಚೂರಿಯನ್ನು ನಿಷೇಧ ಮಾಡ್ತಿದ್ದೇವೆ. ಈ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತೆವೆ. ಇದರ ಹೊರತಾಗಿ ನಿಯಮ ಮೀರಿ ನಿಷೇಧಿತ ಪದಾರ್ಥಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡಿದರೆ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇದಕ್ಕೆ 7 ವರ್ಷದವರೆಗೂ ಜೈಲು ಶಿಕ್ಷೆ ನೀಡಲು ಅವಕಾಶವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ, ರೋಡಮೈನ್ ಬಿ ಅಂಶ ಪತ್ತೆ
ಗೋಬಿ ಮಂಚೂರಿ 171 ಮಾದರಿಗಳನ್ನ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ 107 ಅಸುರಕ್ಷತ ಕೃತಕ ಬಣ್ಣಗಳು ಕಂಡು ಬಂದಿದೆ. ಅದರಲ್ಲಿ ರೋಡೋಮೈನ್ ಬಿ ಹಾಗೂ ಟಾರ್ ಟ್ರಾಸೈನ್ ಕೃತಕ ಬಣ್ಣ ಕಂಡು ಬಂದಿದೆ. ರೋಡೋಮೈನ್ ಕ್ಯಾನ್ಸರ್ ಗೆ ಕಾರಣ, ಇದರ ಬಳಕೆ ಸಂಪೂರ್ಣವಾಗಿ ಕಾನೂನು ಬಾಹಿರ.
ಅದರಲ್ಲೂ ಕಾಟನ್ ಕ್ಯಾಂಡಿಯಲ್ಲಿ 25 ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಿದರೆ ವರದಿಯಲ್ಲಿ 15 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಉಳಿದ 10 ಮಾದರಿಗಳು ಬಣ್ಣ ಇಲ್ಲ. 15 ಮಾದರಿಗಳಲ್ಲಿ ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ, ರೋಡಮೈನ್ ಬಿ ಅಂಶ ಕಂಡು ಬಂದಿದೆ.