ಬೆಳಗಾಯಿತು ವಾರ್ತೆ |www.belagayithu.in
ಲಾಸ್ ಏಂಜಲೀಸ್: ಹಾಲಿವುಡ್‌ನ ಖ್ಯಾತ ನಟ, ಜಾಗತಿಕ ಖ್ಯಾತಿ ಪಡೆದಿರುವ ಓಪನ್‌ಹೈಮರ್ (Oppenheimer) ಸಿನಿಮಾದ ಹೀರೊ ಸಿಲಿಯನ್ ಮರ್ಫಿ (Cillian Murphy) ಅವರಿಗೆ 2024ನೇ ಸಾಲಿನ ಅತ್ಯುತ್ತಮ ನಟ ಆಸ್ಕರ್ (Oscars 2024) ಪ್ರಶಸ್ತಿ ದೊರೆತಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಲಿಯನ್ ಮರ್ಫಿ ಅವರಿಗೆ ಅತ್ಯುತ್ತನ ನಟ (Best Actor) ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದರೊಂದಿಗೆ ಓಪನ್‌ಹೈಮರ್ ಸಿನಿಮಾಗೆ ಮತ್ತೊಂದು ಜಾಗತಿಕ ಗರಿ ಮೂಡಿದಂತಾಗಿದೆ. ಈ ಬಾರಿ ಓಪನ್‌ಹೈಮರ್ ಸಿನಿಮಾಗೆ ಏಳು ಆಸ್ಕರ್ ಪ್ರಶಸ್ತಿಗಳು ದೊರೆತಿವೆ.
ಅತ್ಯುತ್ತಮ ಚಿತ್ರ – ಓಪನ್‌ಹೈಮರ್
ಅತ್ಯುತ್ತಮ ನಟ-ಸಿಲಿಯನ್ ಮರ್ಫಿ – ಓಪನ್‌ಹೈಮರ್
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ-ರಾಬರ್ಟ್ ಡೌನಿ ಜೂನಿಯರ್ -ಓಪನ್‌ಹೈಮರ್
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ-ಎಮ್ಮಾ ಸ್ಟೋನ್ – ಪೂರ್ ಥಿಂಗ್ಸ್
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಡೇವಿನ್ ಜಾಯ್ ರಾಂಡೋಲ್ಫ್ – ದಿ ಹೋಲ್ಡವರ್ಸ್
ಅತ್ಯುತ್ತಮ ನಿರ್ದೇಶನ-ಓಪನ್‌ಹೈಮರ್ – ಕ್ರಿಸ್ಟೋಫರ್ ನೋಲನ್
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ದಿ ಬಾಯ್ ಆ್ಯಂಡ್ ದಿ ಹೆರಾನ್
ಅತ್ಯುತ್ತಮ ಛಾಯಾಗ್ರಹಣ-ಓಪನ್‌ಹೈಮರ್
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್-ಪೂವರ್ ಥಿಂಗ್ಸ್
ಅತ್ಯುತ್ತಮ ಸಂಕಲನ-ಓಪನ್‌ಹೈಮರ್