24.7 C
Bellary
Thursday, February 22, 2024

Localpin

spot_img

ಉಚಿತ ಕ್ಯಾನ್ಸರ್ ಶಿಬಿರ

ಬೆಳಗಾಯಿತು ವಾರ್ತೆ
ಬಳ್ಳಾರಿ: ಬಳ್ಳಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚುತ್ತಿದ್ದು, ಬಡ ವರ್ಗದವರಿಗೆ ಉಚಿತವಾಗಿ ಹೃದಯ ಸಂಬಂಧಿ ಕಾಯಿಲೆಗೆ ಮತ್ತು ಕ್ಯಾನ್ಸರ್ ಗೆ ಶಿಬಿರವನ್ನು ಸಾಯಿ ಸರ್ವಿಸ್ ಟ್ರಸ್ಟ್ ವತಿಯಿಂದ ಪೆಬ್ರವರಿ ಯಲ್ಲಿ ಆಯೋಜನೆ ಮಾಡಲಾಗುವುದು ಎಂದು ನಾರಾ ಪ್ರತಾಪ್ ರೆಡ್ಡಿ ಅವರು ಹೇಳಿದರು.

ನಗರದ ಎಸ್ ಜೆಟಿ ಕಾಲೇಜ್ ಹತ್ತಿರದ ತಮ್ಮ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಹಲವಾರು ಕಾಯಿಲೆಗಳು ಹೆಚ್ಚು ಬರುತ್ತಿದ್ದು, ಇಂದಿನ ಆಹಾರ ಪದ್ದತಿಯೇ ಕಾರಣವಾಗಿದೆ.
ಹಾಗಾಗಿ ಬಡವರ ಅನುಕೂಲಕ್ಕೆ ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಸೂಕ್ತ ಚಿಕಿತ್ಸೆ ನೀಡಲು ಶಿಬಿರವನ್ನು ಆಯೋಜನೆ ಮಾಡಲಾಗುವುದು ಎಂದರು.

ಡಿ. ೨೩ರಂದು ಏಕಾದಶಿ ಪ್ರಯುಕ್ತ ಪುರಾತನ ಕಾಲದ ರೂಪನಗುಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಶೇಷ ಪೂಜೆ ಯನ್ನು ಆಯೋಜನೆ ಮಾಡಲಾಗುವುದು. ಈ ಪೂಜೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆಯಲಿದ್ದಾರೆ ಎಂದರು.
ನಂತರ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ನಿರುದ್ಯೋಗ ಹೆಚ್ಚುತಿದ್ದು ಯುವಕರು ಕೆಲಸ ವಿಲ್ಲದೆ ಇತರೆ ಕೆಲಸದಲ್ಲಿ ತೋಡಗುತ್ತಿದ್ದಾರೆ. ಇದೇ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ಫೆಬ್ರವರಿ ತಿಂಗಳಲ್ಲಿ ಬಳ್ಳಾರಿಯಲ್ಲಿ ಜಾಬ್ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಯುವಕರು ಇದರ ಸದುಪಯೋಗ ಪಡೆಯಲು ಅವರು ಕರೆ ನೀಡಿದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles