34.5 C
Bellary
Wednesday, May 15, 2024

Localpin

spot_img

ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲರು


ಬೆಂಗಳೂರು: ಕನ್ನಡ ಬೋರ್ಡ್ ಕಡ್ಡಾಯ ಕಾಯ್ದೆಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದರು. ರಾಜ್ಯಪಾಲ ನಿರ್ಧಾರವನ್ನು ಕನ್ನಡ ಸಂಘಟನೆಗಳು ಖಂಡಿಸಿವೆ. ಅಂಗಡಿ/ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಎಂದು ಬೋರ್ಡ್ ಬದಲಾವಣೆಗೆ ಫೆಬ್ರವರಿ 28ರವರೆಗೆ ರಾಜ್ಯ ಸರ್ಕಾರ ಗಡುವು ನೀಡಿ ಆದೇಶಿಸಿತ್ತು. ಈ ಕುರಿತ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಸಹಿಗೆ ರಾಜ್ಯ ಸರ್ಕಾರ ಕಳುಹಿಸಿತ್ತು. ಆದ್ರೆ ರಾಜ್ಯಪಾಲರು ಈ ಸುಗ್ರೀವಾಜ್ಞೆಗೆ ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸಭೆ ಬರುವ ಮುಂಚೆ ಸುಗ್ರಿವಾಜ್ಙೆ ಮಾಡಿದ್ದೇವು. ಭಾಷೆ ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ನಾಗರಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದ ನಿಟ್ಟಿನಲ್ಲಿ ಕಾಯ್ದೆ ಮಾಡಿದ್ದೇವು. ರಾಜ್ಯಪಾಲರು ಯಾಕೆ ವಾಪಸು ಕಳುಹಿಸಿದ್ರು ಅಂತ ಗೊತ್ತಿಲ್ಲ ಎಂದು ಹೇಳಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles