34.2 C
Bellary
Saturday, April 26, 2025

Localpin

spot_img

ಹಳಿತಪ್ಪಿದಗೂಡ್ಸ್:ಸಂಚಾರ ಬದಲು

ಮರಿಯಮ್ಮನಹಳ್ಳಿ: ಸಮೀಪದ ವ್ಯಾಸನಕೇರಿ ರೈಲು ನಿಲ್ದಾಣ ಸಮೀಪ ಗೂಡ್ಸ್ ಗಾಡಿಯೊಂದು ಹಳಿತಪಿದ್ದು, ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಿದ್ದು, ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಗುರುವಾರ ಸಂಜೆ ೪.೩೦ರ ಸುಮಾರಿಗೆ ಗೂಡ್ಸ್ ಗಾಡಿಯೊಂದರ ೧೦ ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಳಿಗಳಿಂದ ರೈಲು ತೆರವು ಕಾರ್ಯದ ನಿಮಿತ್ತ ಸಂಜೆ ನಂತರ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹೊಸಪೇಟೆ- ಹರಿಹರ ಪ್ಯಾಸೆಂಜರ್, ಹರಿಹರ- ಬಳ್ಳಾರಿ ಡೆಮೊ ಸ್ಪೆಷಿಯಲ್, ಬಳ್ಳಾರಿ – ಹೊಸಪೇಟೆ ಡೆಮೋ ಸ್ಪೆಷಿಯಲ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಇನ್ನುಳಿದಂತೆ ವಿಜಯಪುರ- ಯಶವಂತಪುರ ಮತ್ತು ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹೊಸಪೇಟೆ- ಕೊಟ್ಟೂರು ಮಾರ್ಗದ ಬದಲಾಗಿ ಹೊಸಪೇಟೆ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮಾರ್ಗದಲ್ಲಿ ಸಂಚಾರಿಸಲಿವೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles