ರೆಡ್ಡಿ ಮಾಡಲ್ ಹೌಸ್‌ಗೆ ಬೆಂಕಿ ಇದು ಕಾಂಗ್ರೆಸ್ ನವರ ಕೃತ್ಯ

ಬೆಳಗಾಯಿತು ವಾರ್ತೆ | Www.belagayithu.in

ಬಳ್ಳಾರಿ: ಜ. 01 ರಂದು ನಡೆದ ಬ್ಯಾನರ್ ಘಟನೆ ಮಾಸುವ ಮುನ್ನವೇಬಳ್ಳಾರಿಯಲ್ಲಿ ಮತ್ತೊಂದು ಅಗ್ನಿ ಅವಘಡ ಘಟನೆ ನಡೆದಿದೆ.ಮಾಜಿ ಸಚಿವ ಬಿ ಶ್ರೀರಾಮುಲು ಮತ್ತು ಶಾಸಕ ಜನಾರ್ದನ್ ರೆಡ್ಡಿ ಅವರ ಮಾಡಲ್‌ ಹೌಸ್‌ಗೆ ಬೆಂಕಿ ಬಿದ್ದಿದ್ದು, ಸ್ಥಳಕ್ಕೆ ಸೋಮಶೇಖರ್ ರೆಡ್ಡಿ ಬಂದು ಪರಿಶೀಲಿಸಿದ್ದಾರೆ.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಶಾಸಕ ಸೋಮಶೇಖ‌ರ್ ರೆಡ್ಡಿ ಅವರು, ಜನವರಿ 1ರಂದು ಆದ ಘಟನೆ ಮಾಸುವ ಮುನ್ನ ಈ ಘಟನೆ ನಡೆದಿದೆ. ಇದು ಕಾಂಗ್ರೆಸ್ ನವರ ಕೃತ್ಯವಾಗಿದೆ. ಅಂದು ನಗರದ ಶಾಸಕ ಭರತ್ ರೆಡ್ಡಿ ಅವರು ಜನಾರ್ದನ್ ರೆಡ್ಡಿ ಅವರ ಮನೆ ಸಟ್ಟು ಹಾಕುತ್ತೇನೆ ಎಂದು ಹೇಳಿದ್ದರು. ಅವರು ಹೇಳಿದ ಹಾಗೆ ಇಂದು ಬೆಂಕಿ ಹಚ್ಚಿದ್ದಾನೆ. ಇದು ಬೇಕು ಅಂತಾನೆ ಮಾಡಿರುವ ಕೃತ್ಯವಾಗಿದ್ದು, ಪೆಟ್ರೋಲ್, ಡಿಸೇಲ್ ಬಳಸಿ ಬೆಂಕಿ ಹಚ್ಚಲಾಗಿದೆ ಎಂದು ಅವರು ಆರೋಪಿಸಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles