ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ನಿಂತಿದ್ದ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಸಮೀಪದ ವ್ಯಾಸನಕೆರೆ ಸ್ಟೇಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಕಡ್ಲಬಾಳು ಗ್ರಾಮದ ಸಂತೋಷ(29)ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇವರು ತಮ್ಮ ಗ್ರಾಮದಿಂದ ಹೊಸಪೇಟೆ ಕಡೆಗೆ ಬೊಲೇರೋಪಿಕಪ್ ನಲ್ಲಿ ದಾಳಿಂಬೆ ತುಂಬಿಕೊಂಡು ಹೋಗುವಾಗ ಡಿಸೇಲ್ ಖಾಲಿಯಾಗಿದ್ದು, ಅದನ್ನು ನೋಡಲು ವಾಹನದಿಂದ ಇಳಿದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಮಹಾರಾಷ್ಟ್ರದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.