ಬಿ.ಎಂ.ಎಂ.ಕಂಪನಿಗೆ ಕಳಪೆ ಕಲ್ಲಿದ್ದಲು:ಕೋಟ್ಯಾಂತರ ರೂ.ವಂಚನೆ.

ಮರಿಯಮ್ಮನಹಳ್ಳಿ:ಹಣ ಗಳಿಸುವ ಉದ್ದೇಶದಿಂದ ಸಮೀಪದ 114 ಡಣಾಪುರ ಗ್ರಾಮದ ಹತ್ತಿರವಿರುವ ಬಿಎಂಎಂಐಎಲ್ ಕಾರ್ಖಾನೆಗೆ ಗುಣಮಟ್ಟದ ಕಲ್ಲಿದ್ದಲು ಎಂದು ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ಮಾರಾಟ ಮಾಡಿ ಬಿಎಂಎಂ ಕಾರ್ಖಾನೆಗೆ 1 ಕೋಟಿ 80 ಲಕ್ಷ ರೂಪಾಯಿಗಳನ್ನು ನಕಲಿ‌ಮಾರಾಟಗಾರರು ವಂಚಿಸಿದ್ದಾರೆ.

ಕಲ್ಲಿದ್ದಿಲು ಮಾರಾಟಗಾರರಿಂದ ಅಕ್ರಮ ಹಣಕಾಸು ಲಾಭ ಪಡೆಯುವ ಸಲುವಾಗಿ ಪ್ಯಾಕ್ಷರಿಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಪರೀಕ್ಷಾ ವರದಿಗಳನ್ನು ಕೃತಕವಾಗಿ ಬದಲಾಯಿಸಿ,ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ,ಕಂಪನಿಯ ನಂಬಿಕೆಗೆ ದ್ರೋಹ ಮಾಡಿ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ತಪ್ಪಾಗಿ ಉತ್ತಮ ಗುಣಮಟ್ಟದದ್ದೆಂದು ತೋರಿಸಿ, ಸದರಿ ಕಲ್ಲಿದ್ದಲನ್ನು ತಪ್ಪಾಗಿ ಉತ್ತಮ ಗುಣಮಟ್ಟದ್ದೆಂದು ಪ್ರಮಾಣೀಕರಿಸಿ.ಈ ತಪ್ಪು ಪ್ರಮಾಣೀಕರಣದ ಪರಿಣಾಮವಾಗಿ, ಬಿಎಂಎಂಐಎಲ್ ಉತ್ತಮ ಗುಣಮಟ್ಟದ ಕಲ್ಲಿದ್ದಲಿಗೆ ಅನ್ವಯಿಸುವ ಬೆಲೆಯನ್ನು ಪಾವತಿಸಿ, ವಾಸ್ತವದಲ್ಲಿ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಸ್ವೀಕರಿಸಿದ್ದು ಹಾಗು ಮಾರಾಟಗಾರರು ಸಹ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಉದ್ದೇಶಪೂರ್ವಕವಾಗಿ ಪೂರೈಸಿ, ಅದನ್ನು ಉತ್ತಮ ಗುಣಮಟ್ಟದದ್ದೆಂದು ತೋರಿಸುವ ಮೂಲಕ ಬಿಎಂಎಂಐಎಲ್ ಗೆ ವಂಚನೆ ಮಾಡಿ. ಇದರಿಂದ ಬಿಎಂಎಂಐಎಲ್ಲೆ ಪ್ರಾಥಮಿಕವಾಗಿ ಮೇಲ್ನೋಟಕ್ಕೆ ಸುಮಾರು 1 ಕೋಟಿ 80 ಲಕ್ಷ ರೂ ಗಳಷ್ಟು ನಷ್ಟ ಉಂಟುವನ್ನುಂಟು ಮಾಡಿರುತ್ತಾರೆ. ಕಾರಣ 1] ಕೆ ಕೆ ಎಂಟರ್ ಪ್ರೈಸಸ್, 2] ಆದಿತ್ಯ ಕೋಲ್ ಸಪ್ರೈಯರ್ಸ್ ಪ್ರೈ.ಲಿ., 3] ಕ್ಯೂಯೆಲ್ಲೋ ಕೋಲ್ ಇಂಡಿಯಾ ಲಿಮಿಟೆಡ್ 4] ಶ್ರೀ ಯಲ್ಲಪ್ಪ 5] ಶ್ರೀ ಈಶ್ವರಪ್ಪ ಡಿ.ಎಸ್. 6] ಎ.ಎಂ. ಗೋಪಾಲ್ ಬಾಬು 7]ಯಲಂಗಿ ಭಾಸ್ಕರ ರಾವ್ 8)ಪ್ರಶಾಂತ್ ಕುಮಾರ್ ಕೆ ಎಲ್ಲರೂ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ನಂಬಿಕೆ ದ್ರೋಹ ಎಸಗಿ ಬಿ.ಎಂ.ಎಂ.ಐ.ಎಲ್.ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ ಇನ್ನು ಕೋಟ್ಯಾಂತರ ರೂಗಳಷ್ಟು ನಷ್ಟ ಉಂಟುವನ್ನುಂಟು ಮಾಡಿದ್ದು ಇರುತ್ತದೆ. ಕಾರಣ ಮೇಲ್ಕಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಂಎಂ ಕಾರ್ಖಾನೆಯ ಆಡಳಿತಾಧಿಕಾರಿಗಳಾದ ಗಣೇಶ್ ಹೆಗಡೆ ದೂರು ನೀಡಿದ್ದಾರೆ.ಈ ಪ್ರಕರಣ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ಪಟ್ಟಣದ ಪಿ.ಎಸ್.ಐ.ತಾರಬಾಯಿ ತನಿಖೆ ನಡೆಸುತ್ತಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles