34 C
Bellary
Wednesday, June 19, 2024

Localpin

spot_img

ಬನ್ನಿಮಹಂಕಾಳಿ ದೇವಿ ಜಾತ್ರೆ – ಕುಂಭೋತ್ಸವ

ಬೆಳಗಾಯಿತು ವಾರ್ತೆhttps://belagayithu.in

ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮದ ಬನ್ನಿಮಹಂಕಾಳಿ ದೇವಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಕುಂಭೋತ್ಸವ ಶುಕ್ರವಾರ ಹಾಗೂ ಶನಿವಾರ ಜರುಗಲಿದ್ದು, ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಸೇರಿದ್ದಾರೆ. ಸಿರುಗುಪ್ಪ ತಾಲ್ಲೂಕಿನ ಬಲಕುಂದಿಯು ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ಗ್ರಾಮ ಐತಿಹಾಸಿಕವಾಗಿ ಬಲ್ಲಕುಂದಿ 300,ಕುಂತಳ ನಗರ ಎಂದು ಕರೆಸಿಕೊಳ್ಳುವ ಈ ಗ್ರಾಮ ಒಂದು ಕಾಲದಲ್ಲಿ ರಾಜಧಾನಿಯಾಗಿತ್ತು. ಇಲ್ಲಿ ನೆಲೆಸಿದ್ದ ಚಂದ್ರಹಾಸ ದೊರೆ 80 ಊರುಗಳ ರಾಜನಾಗಿದ್ದನಂತೆ ಬಲಕುಂದಿ ಚಂದ್ರಹಾಸನ ರಾಜಧಾನಿ ಆಗಿತ್ತು.
ನಂಬಿಕೆಗಳ ಪ್ರಕಾರ ಬನ್ನಿ ಮಹಂಕಾಳಿ ದೇವಸ್ಥಾನ ಮೊದಲು ಗುಡ್ಡದ ಮೇಲೆ ಇತ್ತು, ರಾಜ ಚಂದ್ರಹಾಸ ದೇವಾಲಯ ನಿರ್ಮಾಣ ಮಾಡಿದ್ದರಂತೆ. 1985 ರಲ್ಲಿ ಬೆಟ್ಟದ ಮೇಲಿನಿಂದ ಕೆಳಕ್ಕೆ ತಂದು ಈಗಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಭಕ್ತರು ಸಂಖ್ಯೆ ಹೆಚ್ಚಾಗಿ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ದೇವಸ್ಥಾನದ ಮುಂದಿರುವ ಬನ್ನಿಮರದಲ್ಲಿ ಪಾಂಡವರು ಶಸ್ತ್ರಾಸ್ರಗಳನ್ನು ಇಟ್ಟು ಕಾಡಿಗೆ ಹೋಗಿದ್ದರು ಎಂಬ ಪ್ರತೀತಿಯೂ ಇದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles