ಬಳ್ಳಾರಿ: ನಗರದ ರಾಘವ ಕಲಾ ಮಂದಿರದಲ್ಲಿ ಬಳ್ಳಾರಿ ಸಾಹಿತ್ಯ ಸುಯಜ್ಞ ದ್ವಿತೀಯ ಹವಿಸ್ಸು ವತಿಯಿಂದ ಪುನರುತ್ಥಾನ ಅಧ್ಯಯನ ಕೇಂದ್ರದ ಎರಡನೇ ಕೃತಿಯಾದ ಬಿಸಿಲು ಸಿರು ಸುರಭೀಸಿದ ಪ್ರತಿಭಾಗ್ನಿ ಕುಸುಮಗಳು ಎಂಬ ಪುಸ್ತಕ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪುನರುತ್ಥಾನ ಅಧ್ಯಯನ ಕೇಂದ್ರದ ಶ್ರೀನಾಥ್ ಜೋಷಿ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಿ.ಕೆ. ಗಂಗಾಧರ ಪತ್ತಾರ ಅವರ ಅಧ್ಯಯನ, ಸಂಗ್ರಹ ಸಂಕಲನ, ಲೇಖನದ ಬಿಸಿಲು ಸಿರು ಸುರಭೀಸಿದ ಪ್ರತಿಭಾಗ್ನಿ ಕುಸುಮಗಳು ಪುಸ್ತಕ ನಾಡಿನ ಹೆಸರನ್ನು ಬೆಳಗಿಸಿದ ಬಳ್ಳಾರಿಯ ಮಹಾನ್ ಚೇತನಗಳ ವ್ಯಕ್ತಿ ಚಿತ್ರಣ ಲೇಖನ ಸಂಕಲವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮ್ಸ್ ವಿಶ್ರಾಂತ ಪ್ರಾಚಾರ್ಯರು ಹಾಗೂ ಹಿರಿಯ ವೈದ್ಯರಾದ ಡಾ.ಟೇಕೂರು ರಾಮನಾಥ ವಹಿಸಲಿದ್ದಾರೆ.
ಬಿ.ಪಿ.ಎಸ್. ಸಿ ವಿಶ್ರಾಂತ ಪ್ರಾಂಶುಪಾಲರಾದ ಕೆ.ಎಚ್.ಹರಿಕುಮಾರ್, ವಿಶ್ರಾಂತ ಪ್ರಾಚಾರ್ಯರು ಹಾಗೂ ಹಿರಿಯ ವೈದ್ಯರು ಡಾ.ವಿದ್ಯಾಧರ ಕಿನ್ನಾಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಹಿರಿಯ ವಿದ್ವಾಂಸರಾದ ಡಾ.ಜಾಜಿ ದೇವೇಂದ್ರಪ್ಪ, ಕೆಪಿಟಿಸಿಎಲ್ ನಿವೃತ್ತ ಎಇಇ ಹಾಗೂ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಮುಖ್ಯಸ್ಥರಾದ ಭೀಮಸೇನ ಬಡಿಗೇರ ಅವರು ಉಪಸ್ಥಿತರಿರಲಿದ್ದಾರೆ.
ಕೃತಿ ಪರಿಚಯವನ್ನು ವಿಜಯನಗರ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಇತಿಹಾಸ ಸಂಶೋಧಕರು, ಲೇಖಕರಾದ ಡಾ.ಮೃತ್ಯಂಜಯ ರುಮಾಲೆ ಅವರು ಮಾಡಲಿದ್ದಾರೆ.
ಆಶಯ ನುಡಿಯನ್ನು ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಹ ಸಂಯೋಜಕರಾದ ರಘುನಂದನ್ ಅವರು ಮಾತನಾಡಲಿದ್ದಾರೆ.
ಲೇಖಕರ ಅನುಭಾವದ ನುಡಿಯನ್ನು ಹಿರಿಯ ಸಾಹಿತಿ ಟಿ.ಕೆ.ಗಂಗಾಧರ್ ಪತ್ತಾರ್ ಅವರು ಆಡುವವರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಪುಸ್ತಕ ಲೇಖಕ ಟಿ.ಕೆ. ಗಂಗಾಧರ ಪತ್ತಾರ, ಹಿರಿಯ ರಂಗಕರ್ಮಿ ವೆಂಕೋಬ ಚಾರಿ ಅವರು ಉಪಸ್ಥಿತರಿದ್ದರು.
