ಬೆಳಗಾಯಿತು ವಾರ್ತೆ
ಬಳ್ಳಾರಿ : ಟಿಬಿ ಡ್ಯಾಂನಿಂದ 2ನೇ (ಬೇಸಿಗೆ) ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಿಂದ ನಗರದ ರಾಯಲ್ ವೃತ್ತದಲ್ಲಿ ಶುಕ್ರವಾರ ಬೃಹತ್ ಪ್ರೊಟೆಸ್ಟ್ ನಡೆಸಿದರು.
ಎಂಎಲ್’ಸಿಗಳಾದ ಎನ್. ರವಿಕುಮಾರ್ ಹಾಗೂ ವೈ.ಎಂ ಸತೀಶ್ ನೇತೃತ್ವದಲ್ಲಿ ಪ್ರೊಟೆಸ್ಟ್ ನಡೆಯಿತು. ಬಳ್ಳಾರಿಯ ರಾಯಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಶಿವರಾಜ್ ತಂಗಡಿಗಿ ಅವರ ಪ್ರತಿಕೃತಿ ದಹಿಸಿದ ಬಿಜೆಪಿ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗಿದ್ರು. ಎರಡನೇ ಬೆಳೆಗೆ ನೀರು ಹರಿಸಿ ಸರ್ಕಾರ ರೈತರ ಹಿತ ಕಾಯಬೇಕು. ಇಲ್ಲವಾದಲ್ಲಿ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ಪ್ರತಿ ರೈತರಿಗೂ ರೂ 25,000 ಪರಿಹಾರ ಒದಗಿಸಲಿ ಎಂದು ಆಗ್ರಹಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನಿಲ ಕುಮಾರ್ ಮೋಕ, ಎಂಎಲ್ಸಿ ವೈ ಎಂ ಸತೀಶ್, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ರಾಮಲಿಂಗಪ್ಪ,, ಗುರುಲಿಂಗನ ಗೌಡ ಸೇರಿದಂತೆ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.





