ಮರಿಯಮ್ಮನಹಳ್ಳಿ:ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ.ಯಾಗಿ ಕಾರ್ಯನಿರ್ವಹಿಸಿ,ಗುರುವಾರ ಸೇವೆಯಿಂದ ನಿವೃತ್ತಿಯಾದ ಎನ್.ಮುರಾರಿರವರು,ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗು ಶ್ರೀಆಂಜನೇಯಸ್ವಾಮಿಗಳಿಗೆ ವಿಶೇಷ ಪೂಜೆಸಲ್ಲಿಸಿ,ಕುಟುಂಬದೊಂದಿಗೆ ಉಭಯದೇವರುಗಳಿಗೆ ಛತ್ರಿಕೆಗಳನ್ನು ಸಮರ್ಪಿಸಿದರು.ಸರ್ಕಾರಿ ನೌಕರರಿಗೆ ತಾವು ಸೇವೆಸಲ್ಲಿಸಿದ ಊರಿನ ಕುರಿತು ಅಭಿಮಾನಹೊಂದುವುದು ವಿರಳ.ಮುರಾರಿರವರು ಪಟ್ಟಣದ ದೇವರುಗಳಿಗೆ ನೀಡಿದ ಕಾಣಿಕೆಯಿಂದ ಮಾದರಿಯಾದರು.
