ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಇದೊಂದು ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆಯ 41ಶಾಖೆಗಳಲ್ಲಿ ಒಂದು ಬಳ್ಳಾರಿ ಶಾಖೆಯು 1973ರಲ್ಲಿ ದಿ.ಡಾ.ಎನ್ ಸಿ. ಶ್ರೀಧರ್ ಅವರ ತಂಡದ ನೇತೃತ್ವದಲ್ಲಿ ಒಂದು ಸಣ್ಣದಾದ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಗಿ ಸಂಸ್ಥೆ ಈಗ ಸುವರ್ಣ ಮಹೋತ್ಸವ ಆಚರಿಸುತ್ತಿದೆ ಎಂದು ವಿಜಯ್ ಸಿಂಹ ಅವರು ಹೇಳಿದರು.
ನಗರದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮೂರು ದಿನಗಳ ಕಾಲ ಆಗಸ್ಟ್ 17,18ರಂದು ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ರಂಗೋಲಿ,ಹಾಡು ನೃತ್ಯ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
19 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ನಾಗೇಂದ್ರ ಆಗಮಿಸಲಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಕೇಂದ್ರ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಅಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಸಂಸ್ಥೆಗೆ ಯಾರು ಸಹಾಯ ಮಾಡಿದ್ದಾರೆ ಅವರನ್ನು ಸ್ಮರಣೆ ಹಾಗೂ ಸನ್ಮಾನಸಿ ಗೌರವಿಸಲಾಗುತ್ತದೆ
ಈ ಸಂದರ್ಭದಲ್ಲಿ ರಮಾದೇವಿ, ಅಹಿ ರಾಜ್, ಭಾಗ್ಯ ಕೆ.ಆರ್. ಪ್ರಶಾಂತ್ ಖೇಣಿ, ವಿಷ್ಣು, ಗಿರೀಶ್ ಸೇರಿದಂತೆ ಮತ್ತಿತರ ಇದ್ದರು.