36.5 C
Bellary
Tuesday, March 5, 2024

Localpin

spot_img

77 ನೇ ಸ್ವಾತಂತ್ರೋತ್ಸವ ದಿನ ಆಚರಣೆ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸರ್ಕಾರದ ಮುಖ್ಯ ಗುರಿ

ಬಳ್ಳಾರಿ: ಬಳ್ಳಾರಿಯಲ್ಲಿ 77 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿAದ ಆಚರಿಸಲಾಯಿತು.
ಜಿಲ್ಲಾಡಳಿತದ ವತಿಯಿಂದ ನಗರದ ವಿಮ್ಸ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಿದರು. ವಿವಿಧ ತಂಡಗಳ ಪಥಸಂಚಲನ ವೀಕ್ಷಿಸಿ ಮತ್ತು ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದರು.
ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ ಬಳ್ಳಾರಿ ಜಿಲ್ಲೆಯು ಇಂದು ವಿವಿಧ ಇಲಾಖೆಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ದಾಖಲಿಸುತ್ತಾ ಮುನ್ನಡೆದಿದ್ದೇವೆ ಎಂದರು.
ಬಳ್ಳಾರಿ ಜಿಲ್ಲೆಯ ಭೌಗೋಳಿಕ ಕ್ಷೇತ್ರವು 4,00,043 ಹೆಕ್ಟೇರ್ ಇದ್ದು, ಇದರಲ್ಲಿ ಸಾಗುವಳಿ ಕ್ಷೇತ್ರವು 2,78,227 ಹೆಕ್ಟೇರ್ ಇದೆ. ಇದರಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಕ್ಷೇತ್ರವು 64,953 ಹೆಕ್ಟೇರ್ ಪ್ರದೇಶವು ಮಳೆಯಾಶ್ರಿತ ಹಾಗೂ 1,08,943 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 303 ಮಿ.ಮೀ. ಮಳೆಯಾಗಿಬೇಕಾಗಿದ್ದು, ವಾಸ್ತವವಾಗಿ 220 ಮಿ.ಮೀ. ಮಳೆಯಾಗಿದೆ. ಇಲ್ಲಿಯವರೆಗೂ 71,268 ಹೆಕ್ಟೇರ್‌ಗಳ ಪ್ರದೇಶದಲ್ಲಿ ಬಿತ್ತನೆಯಾಗಿದೆ ಅಂದರೆ ಶೇ.40.98ರಷ್ಟು ಆಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ, ಮೆಕ್ಕಜೋಳ ಸಜ್ಜೆ, ನವಣೆ, ಬೆಳೆಗಳ ಬಿತ್ತನೆ ಪ್ರಗತಿಯಲ್ಲಿದೆ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ಭತ್ತ ನಾಟಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಹೇಳಿದರು.
ಸಮರ್ಪಕ ಬಿತ್ತನೆ ಬೀಜ ಪೂರೈಕೆ ಮತ್ತು ವಿತರಣೆ:
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 9111 ಕ್ಟಿಂಟಾಲ್‌ಗಳ ಕಾರ್ಯಕ್ರಮ ಗುರಿಯಿದ್ದು, ಸದರಿ ಹಂಗಾಮಿನಲ್ಲಿ 3985 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ 18,521 ರೈತರಿಗೆ ವಿತರಿಸಲಾಗಿದೆ. ಬೀಜ ವಿತರಣೆ ಕಾರ್ಯಕ್ರಮವೂ ಮುಂದುವರೆದಿದೆ ಎಂದರು.
ಮಹಾತ್ಮಗಾAಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ):
ಜಿಲ್ಲೆಯಲ್ಲಿ 2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 1117 ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು ನಿರ್ಮಾಣ ಹಾಗೂ 58 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 2,67,155 ಮಾನವ ದಿನಗಳನ್ನು ಸೃಜಿಸಿ ಆರ್ಥಿಕ ಒಟ್ಟು ರೂ.776.67 ಲಕ್ಷಗಳ ವೆಚ್ಚವನ್ನು ಭರಿಸಿಲಾಗಿದೆ ಎಂದು ಹೇಳಿದರು.
ಬೆಳೆ ಸಮೀಕ್ಷೆ:
ಬೆಳೆ ಸಮೀಕ್ಷೆಯು ಮಹಾತ್ವಕಾಂಕ್ಷಿ ಯೋಜನೆಯಾಗಿದ್ದು, ದೇಶದಲ್ಲೇ ಪ್ರಪ್ರಥಮ ಬಾರಿಗೆ ರೈತರೆ ಸ್ವತಃ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು 2023-24ನೇ ಸಾಲಿನಲ್ಲಿ “ಈಚಿಡಿmeಡಿs ಅಡಿoಠಿ Suಡಿveಥಿ ಂಠಿಠಿ 2023-24” ಮೂಲಕ ಅಪ್‌ಲೋಡ್ ಮಾಡಲು ಸ್ವಾಭಿಮಾನಿ ರೈತರಿಗೆ ಸುವರ್ಣಾವಕಾಶವನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಖಾಸಗಿ ನಿವಾಸಿಗಳ ಸಹಾಯದಿಂದ ರೈತರು ಬೆಳೆ ಸಮೀಕ್ಷೆ ಉತ್ಸವದಲ್ಲಿ ಪಾಲ್ಗೊಂಡು 2023-24ನೇ ಸಾಲಿನಲ್ಲಿ ಒಟ್ಟು 3,80,888 ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಚಿತ್ರವನ್ನು ಮೊಬೈಲ್ ಆಪ್‌ನಲ್ಲಿ ಬೆಳೆಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.
ಬೆಳೆ ವಿಮೆ:
ಜಿಲ್ಲೆಗೆ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿಯಲ್ಲಿ 1766 ಫಲಾನುಭವಿಗಳಿಗೆ ಬೆಳೆ ವಿಮೆ ಪರಿಹಾರ ರೂ.426.61 ಲಕ್ಷ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲಾ ಖನಿಜ ಪ್ರತಿಷ್ಟಾನದಿಂದ ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಬದ್ಧ:
ರಾಜ್ಯ ಸರ್ಕಾರವು 2016ನೇ ಸಾಲಿನಲ್ಲಿ ಡಿ.ಎಂ.ಎಫ್ ನಿಯಮಗಳಂತೆ ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್ನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ರೂ.2270.46 ಕೋಟಿಗಳ ಮೊತ್ತವನ್ನು ಡಿ.ಎಂ.ಎಫ್ ವಂತಿಗೆಯಾಗಿ ಸಂಗ್ರಹವಾಗಿದೆ. ಈವರೆಗೂ 6 ಕ್ರಿಯಾ ಯೋಜನೆಗಳಲ್ಲಿನ ಕಾಮಗಾರಿಗಳಿಗೆ ಒಟ್ಟು ರೂ.1593.68 ಕೋಟಿ ಅನುಮೋದಿಸಿ, ಒಟ್ಟು 1407 ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಒಟ್ಟು ರೂ.597.93 ಕೋಟಿಗಳ ಮೊತ್ತ ವೆಚ್ಚ ಮಾಡಲಾಗಿದೆ. ಸದರಿ ಕಾಮಗಾರಿಗಳಲ್ಲಿ 989 ಕಾಮಗಾರಿಗಳು ಪೂರ್ಣಗೊಂಡಿದ್ದು, 169 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಹಾಗೂ 77 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಅವರು ತಿಳಿಸಿದರು.
ಅನುಮೋದಿಸಲಾದ ಕ್ರಿಯಾ ಯೋಜನೆಗಳಲ್ಲಿ ಆರೋಗ್ಯ ವಲಯಕ್ಕೆ ರೂ. 200.01 ಕೋಟಿ, ಕುಡಿಯುವ ನೀರಿನ ವಲಯಕ್ಕೆ ರೂ.383.00 ಕೋಟಿ, ಶೈಕ್ಷಣಿಕ ವಲಯಕ್ಕೆ ರೂ.247.80 ಕೋಟಿ, ಮೂಲಭೂತ ಸೌಕರ್ಯಗಳಿಗೆ ರೂ.448.14 ಕೋಟಿ, ನೀರಾವರಿ ಮತ್ತು ನೈರ್ಮಲ್ಯ ವಲಯಕ್ಕೆ ಒಟ್ಟು ರೂ.147.07 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಅಭಿವೃದ್ಧಿ, ಕೌಶ್ಯಲಾಭಿವೃಧ್ದಿ ವಲಯ, ಪರಿಸರ ರಕ್ಷಣೆ ಮತ್ತು ಇತರೆ ವಲಯಗಳಿಗೆ ಸೇರಿ ಒಟ್ಟು ರೂ.167.53 ಕೋಟಿಗಳ ಮೊತ್ತದ ವಿವಿಧ ಕಾಮಗಾರಿಗಳನ್ನು ಅನುಮೋದಿಸಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.
ಡಿ.ಎಂ.ಎಫ್ ಅಡಿಯಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಎಲ್ಲಾ ವಿಭಾಗದಲ್ಲಿಯೂ ಮೇಲ್ದರ್ಜೆಗೆ ಏರಿಸುವ ಕಾಯಕಲ್ಪ ಯೋಜನೆ, ಕಂಪ್ಲಿ ಹಾಗೂ ಕುರುಗೋಡು ತಾಲ್ಲೂಕು ಕೇಂದ್ರಗಳಲ್ಲಿ ರೂ.40 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಮಿಸುವ ಕಾಮಗಾರಿಗಳು, ಉಳಿದ ಆಸ್ಪತ್ರೆಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳನ್ನು ಮತ್ತು ಅಂಬುಲೆನ್ಸ್ ನೀಡುವ ಯೋಜನೆ, ಸಂಗನಕಲ್ಲು ಎಸ್.ಟಿ.ಪಿ ಉನ್ನತೀಕರಣ, ಬಳ್ಳಾರಿ ನಗರದಲ್ಲಿ ಆರೋಗ್ಯ ಸೌಧ ನಿರ್ಮಾಣ, ವಿವಿಧ ಶಾಲಾ ಮತ್ತು ಕಾಲೇಜುಗಳ ಉನ್ನತೀಕರಣ, ಸಂಡೂರು ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ:
ನಮ್ಮ ಸರ್ಕಾರದ ಮಹತ್ತರ ಯೋಜನೆಗಳ ಮೂಲಕ ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರ ಬದುಕಿನಲ್ಲಿ ಆರ್ಥಿಕ ಚೈತನ್ಯ ತುಂಬಲು ರಾಜ್ಯ ಸರ್ಕಾರವು 05 ಗ್ಯಾರಂಟಿ ಯೋಜನೆಗಳು ರೂಪಿಸಿದೆ. ಈ ಯೋಜನೆಗಳಿಂದ ಮಹಿಳಾ ಸಬಲೀಕರಣ ಜೊತೆಗೆ ಎಲ್ಲಾ ವರ್ಗಗಳಿಗೆ ಸೇರಿದ ಕಡು ಕಷ್ಟದಲ್ಲಿರುವ ಜನರ ಜೀವನ ಮಟ್ಟ ಸುಧಾರಣೆಯಾಗಲು ಈ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಅನುಷ್ಟಾನಗೊಳಿಸಿರುವ ಗೃಹಲಕ್ಷಿö್ಮ ಯೋಜನೆಯು, ಕುಟುಂಬದ ಯಜಮಾನಿಗೆ ಮಾಸಿಕ ರೂ.2000/- ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸೇವಾ ಸಿಂಧು ತಂತ್ರಾAಶದಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,03,790 ಕುಟುಂಬ ಆಹಾರ ಪಡಿತರ ಚೀಟಿಗಳಲ್ಲಿ ಒಟ್ಟು 2,60,000 ಫಲಾನುಭವಿಗಳು ನೊಂದಣಿ ಮಾಡಿಕೊಂಡಿದ್ದು, ಶೇ.86ರಷ್ಟು ಪ್ರಗತಿಯಾಗಿರುತ್ತದೆ.
ರಾಜ್ಯದಾದ್ಯಾಂತ ವಿವಿಧ ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು, ಶಕ್ತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ 5,71,000 ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ.
ಮಾಸಿಕ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 2,26,272 ಫಲಾನುಭವಿಗಳು ಇದರ ಲಾಭ ಪಡೆದಿರುತ್ತಾರೆ.
ಘನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯ ಒಟ್ಟು 05 ತಾಲೂಕುಗಳಲ್ಲಿ 2,29,499 ಅರ್ಹ ಪಡಿತರ ಚೀಟಿಗಳ ಒಟ್ಟು 8,81,082 ಪಡಿತರ ಕುಟುಂಬ ಸದಸ್ಯರುಗಳಿಗೆ ತಲಾ 05 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇನ್ನುಳಿದ 05 ಕೆ.ಜಿ. ಅಕ್ಕಿಗೆ ಸಮನಾಂತರವಾಗಿ ರೂ.170/- ರಂತೆ ಒಟ್ಟು ರೂ.14,54,36,020/- ಮೊತ್ತವನ್ನು ಪಡಿತರದಾರರ ಕುಟುಂಬಗಳಿಗೆ ನೇರ ಹಣ (ಡಿಬಿಟಿ) ಮೂಲಕ ಸಂದಾಯ ಮಾಡಲಾಗಿದೆ.
ಮತ್ತೊಂದು ಯೋಜನೆಯಾದ ಯುವ ನಿಧಿ ಯೋಜನೆಯು 2022-23 ನೇ ಸಾಲಿನಲ್ಲಿ ತೇರ್ಗಡೆಯಾಗಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಪದವೀದರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ ರೂ.3,000 ಹಾಗೂ ಡಿಪ್ಲೋಮ ಪಾಸಾದ ನಿರುದ್ಯೋಗಿ ಯವಕರಿಗೆ ಪ್ರತಿ ತಿಂಗಳು ರೂ.1,500 ಗಳ ಭತ್ಯೆಯನ್ನು ನೀಡುವ ಸಲುವಾಗಿ ಘೋಷಿಸಿಲಾಗಿದ್ದು, ಈ ಯೋಜನೆಯನ್ನು ಬರುವ ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದು ಅವರು ವಿವರಿಸಿದರು.
ಹೀಗೆ ಸರ್ಕಾರದ 05 ಮಹತ್ತರ ಯೋಜನೆಗಳಲ್ಲಿ ಸರ್ಕಾರವು 04 ಯೋಜನೆಗಳನ್ನು ಪೂರೈಸಿ ನುಡಿದಂತೆ ನಡೆದುಕೊಂಡಿದೆ ಎಂದರು.

ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು:
ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಗರದಲ್ಲಿ ಸುಸಜ್ಜಿತವಾದ ರೂ.2 ಕೋಟಿ ವೆಚ್ಚದಲ್ಲಿ ಹಾಕಿ ಟರ್ಫ್ ನಿರ್ಮಾಣ ಮಾಡಲಾಗಿದೆ, ಅದೇ ರೀತಿಯಾಗಿ ರೂ.2 ಕೋಟಿ ಅನುದಾನದಲ್ಲಿ ಅಥ್ಲೆಟಿಕ್ಸ್ ಸಿಂಥಟಿಕ್ ಟ್ಯಾಕ್ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಸ್ಟೇಡಿಯಂ ಹತ್ತಿರ ಉತ್ತಮವಾದ ನೀರಿನ ಕೆರೆಯನ್ನು ನಿರ್ಮಿಸಲಾಗಿದ್ದು, ನಗರದ ಸಾರ್ವಜನಿಕರಿಗೆ ಬಳಕೆಗೆ ಅನುಕೂಲಕರವಾಗಿದೆ ಎಂದರು.
ಬಳ್ಳಾರಿ ನಗರದಲ್ಲಿ ಅಂತರರಾಷ್ಟಿçÃಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಈಗಾಗಲೇ “ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್” (ಏSಅಂ) ರವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಸ್ಟೇಡಿಯಂ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಆದ್ಯತೆ:
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗದವರ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಪರಿಶಿಷ್ಟ ವರ್ಗದವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗಾಗಿ ಇಲಾಖೆಯು ಶ್ರಮಿಸುತ್ತಿದೆ ಎಂದು ಹೇಳಿದರು.
ಭಾರತ ಸಂವಿಧಾನ ಅನುಚ್ಛೇಧ 275(1)ರಡಿ ಹಾಗೂ ವಿಶೇಷ ಕೇಂದ್ರಿಯ ನೆರವಿನಡಿ ಮೂಲಭೂತ ಸೌಲಭ್ಯಗಳಾದ ಹೈನುಗಾರಿಕೆ ಘಟಕ, ಹಸು, ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಸರಕು, ಸಾಗಾಣಿಕೆ ವಾಹನ ಘಟಕಗಳಿಗೆ 263 ಫಲಾನುಭವಿಗಳಿಗೆ ಸ್ವತ್ತು ವಿತರಿಸಿ, ರೂ.229.26 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅಂತರ್ಜಾತಿಯ ವಿವಾಹ, ಸಾಮೂಹಿಕ ವಿವಾಹಗಳಿಗೆ ಅನುದಾನ ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ತಾಲೂಕು, ಹೋಬಳಿ ಗ್ರಾಮದ ಮಟ್ಟದ ವಾಲ್ಮೀಕಿ ಸಮುದಾಯಭವನಗಳ ನಿರ್ಮಾಣ ಕಾಮಗಾರಿಗೆ ರೂ.625.00 ಲಕ್ಷ ಅನುದಾನ ಮಂಜೂರಾಗಿದ್ದು, ರೂ.117.50 ಲಕ್ಷ ಅನುದಾನವನ್ನು ಈಗಾಗಲೇ ಏಜೆನ್ಸಿಯವರಿಗೆ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಅಪರೆಲ್ ಪಾರ್ಕ್, ಬಳ್ಳಾರಿ ಜೀನ್ಸ್ ಉದ್ಯಮಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದು, ಈ ಕುರಿತು ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳೊAದಿಗೆ ಸಂವಾದ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸುಸಜ್ಜಿತವಾದ ಅಪರೆಲ್ ಪಾರ್ಕ್ನ್ನು ಬಳ್ಳಾರಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಹೀಗೆ ಜಿಲ್ಲೆಯ ವಿವಿಧ ಇಲಾಖೆಗಳು ಹಾಗೂ ಸರ್ಕಾರದ ಯೋಜನೆಗಳ ಮೂಲಕ ಪ್ರಗತಿಯತ್ತ ಸಾಗಲು ತಾವೆಲ್ಲರೂ ಸರ್ಕಾರದೊಂದಿಗೆ ಕೈ ಜೋಡಿಸಿ ಜಿಲ್ಲೆಯನ್ನು ಅಭಿವೃದ್ದಿಯತ್ತ ಕೊಂಡ್ಯೊಯಲು ಕಂಕಣಬದ್ದರಾಗೋಣ ಎಂದು ಹೇಳಿದ ಅವರು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ದುಡಿಯಬೇಕೆಂದು ಪಣತೊಡುತ್ತಾ, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಸಾಧಿಸುವುದೆಂಬ ದೃಢ ವಿಶ್ವಾಸದೊಂದಿಗೆ ಭಾರತ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಸಂಕಲ್ಪ ಮಾಡುತ್ತಾ ಪ್ರಗತಿಪರವಾದ ಸುಸ್ಥಿರ ಅಭಿವೃದ್ದಿಯೊಂದಿಗೆ ಸುಭಿಕ್ಷ ನಾಡನ್ನು ಕಟ್ಟಲು ಎಲ್ಲರೂ ಈ ದಿನ ಶಪಥ ಮಾಡೋಣ ಎಂದು ತಮ್ಮ ಧ್ವಜಾರೋಹಣ ಸಂದೇಶದಲ್ಲಿ ತಿಳಿಸಿದರು.
  ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
 ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಪೊಲೀಸ್ ಮಹಾನಿರೀಕ್ಷಕ ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಮೊಹಮ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles