ಮರಿಯಮ್ಮನಹಳ್ಳಿ: ಪಟ್ಟಣದ ಆರಾದ್ಯ ದೈವಗಳಾದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗು ಶ್ರೀಆಂಜನೇಯಸ್ವಾಮಿಗಳ ನೂತನ ಜೋಡಿ ರಥಗಳ ನಿರ್ಮಾಣಕ್ಕೆ ಬೇಕಾಗುವ ಮರದದಿನ್ನೆಗಳು ಇಂದು ಪಟ್ಟಣಕ್ಕೆ ಆಗಮಿಸಿದ ಹಿನ್ನೆಯಲ್ಲಿ,ದಿನ್ನೆಗಳನ್ನು ಹೊತ್ತು ತಂದ ಲಾರಿಗಳನ್ನು ಪಟ್ಟಣದ ಮುಖಂಡರು ಸ್ವಾಗತಿಸಿ,ಮರದ ದಿನ್ನೆಗಳಿಗೆ ಪೂಜೆಸಲ್ಲಿಸಿದರು.ಈ ಸಂಧರ್ಭದಲ್ಲಿ ನೂತನರಥದ ನಿರ್ಮಾಣಕ್ಕೆ ದೇಣಿಗೆ ನೀಡಿದ ಜಯರಾಜ್ ಸಿಂಗ್ ರವರನ್ನು ದೇವಸ್ಥಾನದ ಆಡಳಿತಾಧಿಕಾರಿ ಹೆಚ್.ನಾಗರಾಜ್ ಸನ್ಮಾನಿಸಿದರು.ಸ್ಥಳಿಯ ಮುಖಂಡರಾದ ಚಿದ್ರಿಸತೀಶ್,ಗೊವಿಂದರ ಪರಶುರಾಮ,ಎನ್.ಸತ್ಯನಾರಾಣ,ಉರುವಕೊಂಡ ಎಂ.ವೆಂಕಟೇಶ, ಕೆ.ರಘುವೀರ್,ಗಂಗಾವತಿ ಸತ್ಯನಾರಾಯಣಶೆಟ್ಟಿ,ಎನ್.ಸಚ್ಚಿದಾನಂದ ಶೆಟ್ಟಿ, ಚುಕ್ಕಿನಾಗೇಶ್,ಡಾ.ಎರಿಸ್ವಾಮಿ, ಗುಂಡಾಸ್ವಾಮಿ, ಈಡಿಗರನಾಗರಾಜ,ತಳವಾರ ಹುಲುಗಪ್ಪ,ಎಲೆಗಾರ ಮಂಜುನಾಥ,ಸಜ್ಜೇದ ವಿಶ್ವನಾಥ ಸೇರಿದಂತೆ ಇತರರಿದ್ದರು.
