ಮರಿಯಮ್ಮನಹಳ್ಳಿ:ಪಟ್ಟಣದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ( ಜಿಟಿಟಿಸಿ )ವೈದ್ಯಕೀಯಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತಾ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ್ ಧಿಡೀರ್ ಭೇಟಿ ನೀಡಿ ಪರಿಶೀಲಿಸಿ,ಕೇಂದ್ರಕ್ಕೆ ಒದಗಿಸಿರುವ ಅತ್ಯುನ್ನತ ತಂತಜ್ಞಾನದ ಪ್ರಯೋಗಾಲಯಗಳನ್ನು ವೀಕ್ಷಿಸಿ,ನಂತರ ಸುದ್ದಿಗಾರರೊಂದಿ ಮಾತನಾಡಿ,ತರಬೇತಿಗಾರದ ಸದುಪಯೋಗವನ್ನು ಸ್ಥಳೀಯ ಯುವಕ-ಯುವತಿಯರು ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದರ ಮೂಲಕ ಉದ್ಯೋಗಸ್ಥರಾಗಬೇಕೆಂದು ಕರೆ ನೀಡಿದರು.
