ಜಿ.ವಿ.ಸುಬ್ಬರಾವ್.
ಹಂಪಿ: ಹಂಪಿಉತ್ಸವ-೨೪ರ ಮೂರು ದಿನಗಳ ಹಂಪಿ ಉತ್ಸವ ಅದ್ದೂರಿಯಾಗಿ ಸಿ.ಎಂ.ಸಿದ್ದರಾಮಯ್ಯರವರಿಂದ ಚಾಲನೆ ಪಡೆಯಿತು. ಹಂಪಿಯ ನೆಲದ ದೊರೆ ವಿರುಪಾಕ್ಷ ಮಾತ್ರ ಕತ್ತಲಲ್ಲಿ ಮುಳುಗಿದ್ದಾನೆ. ವಿರುಪಾಕ್ಷ ದೇಗುಳದ ರಾಜಗೋಪುರ ಬಿಷ್ಟಪಯ್ಯ ಗೋಪುರಕ್ಕೆ ದೀಪಾಲಂಕಾ ಇಲ್ಲದೆ ಗೋಪುರ ಕತ್ತಲೆಯಲ್ಲಿ ಮುಳುಗಿತ್ತು. ಉತ್ಸವದ ನಿಮಿತ್ತ ಹೊಸಪೇಟೆಯಿಂದಹಂಪಿಯವರೆಗೂ ದೀಪಾಲಂಕಾರ ಝಗಮಗಿಸುತ್ತಿದ್ದರೆ.ರಾಜಗೋಪುರ ಮಾತ್ರ ದೀಪಾಲಂಕಾರ ವಿಲ್ಲದೆ ಕಳೆಗುಂದಿದೆ ಇದನ್ನು ನೋಡಿದ ಉತ್ಸವ ಕಣ್ತುಂಬಿಕೊಳ್ಳಲು ಬಂದ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.
ಉತ್ಸವ ಝಗಮಗಿಸಲು ಕೋಟ್ಯಾಂತರ ಖರ್ಚು ಮಾಡುವ ಜಿಲ್ಲಾಡಳಿತ ಬಿಷ್ಟಪಯ್ಯ ಗೋಪುರವನ್ನು ಅಲಂಕರಿಸದೆ ನಿರಾಭರಣವಾಗಿಸಿರುವುದು ಬೇಸರದ ಸಂಗತಿ.
“ಖಾಲಿಕುರ್ಚಿ”
ಮುಖ್ಯವೇದಿಕೆ ಹೊರತುಪಡಿಸಿದರೆ ಇನ್ನುಳಿದ ಮೂರುವೇದಿಕೆಗಳಲ್ಲಿ ಬಹುತೇಕ ಕುರ್ಚಿಗಳು ಖಾಲಿ-ಖಾಲಿಯಾಗಿದ್ದವು.ವಸ್ತುಪ್ರದರ್ಶನಗಳಲ್ಲಿ ಜನಸಂದಣಿಯಿತ್ತು.ಆದರೆ ವೇದಿಕೆಗಳಲ್ಲಿ ಮಾತ್ರ ಖಾಲಿಕುರ್ಚಿಗಳಿಗೆ ಕಲಾವಿದರು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.ವಿರುಪಾಕ್ಷ ದೇಗುಲದ ಆವರಣದಲ್ಲಿ,ಎದುರುಬಸವಣ್ಣ ವೇದಿಕೆಗಳಲ್ಲಿ ವೀಕ್ಷಕರು ಇಲ್ಲದೆ ಭಣಗುಡುತ್ತಿದ್ದವು.



