ಬೆಳಗಾಯಿತುವಾರ್ತೆ,.
ಮರಿಯಮ್ಮನಹಳ್ಳಿ:ಪಟ್ಟಣದ ಬಸ್ ನಿಲ್ದಾ,ದಿಂದ ಮಾಯೆ(ಕಳ್ಳತನ)ಯಾಗಿದ್ದ ಬಸ್ ಪಟ್ಡಣದ ಪೋಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕೆಲವೆ ಗಂಟೆಗಳಲ್ಲಿ ಪತ್ತೆಹಚ್ಚಿದ್ದಾರೆ.
ವಿಜಯನಗರ ಎಸ್ಪಿ. ಬಿಎಲ್.ಹರಿಬಾಬು,ಕೂಡ್ಲಿಗಿ ವಿಭಾಗ ಡಿಎಸ್.ಪಿ.ಮಲ್ಲೇಶಪ್ಪ ಮಲ್ಲಾಪುರ ಮಾರ್ಗದರ್ಶನದಲ್ಲಿ ಸಿ.ಪಿ.ಐ ವಿಕಾಸ್ ಲಮಾಣಿರವರ ನೇತೃತ್ವದಲ್ಲಿ ಸಿಬ್ಬಂದಿಯವರೊಂದಿಗೆ ಕಳ್ಳತನವಾದ ಬಸ್ಸು ಮತ್ತು ಆರೋಪಿ ಪತ್ತೆಕುರಿತು,ತೆರಳಿದ ವೇಳೆ ಚಿಲಕನಹಟ್ಟಿ ಬಸ್ ನಿಲ್ದಾಣದಲ್ಲಿ ಹೆಚ್.ಕೆಂಚಪ್ಪ(37 ವರ್ಷ)ಹ.ಬೊ.ಹಳ್ಳಿ ತಾಲೂಕಿನ ಮಗಿಮಾವಿನಹಳ್ಳಿಯ ಈತನನ್ನು ಹಿಡಿದು ವಿಚಾರಣೆ ಮಾಡಲು ಸದರಿಯವನು ಬಸ್ಸನ್ನು ಕಳುವು ಮಾಡಿ ಮಗಿಮಾವಿನಹಳ್ಳಿ ಕ್ರಾಸ್ ನಲ್ಲಿರುವ ಕಸ ವಿಲೇವಾರಿ ಮಾಡುವ ಸ್ಥಳದಲ್ಲಿ ಬಚ್ಚಿಟ್ಟ ಬಗ್ಗೆ ಒಪ್ಪಿಕೊಂಡಿದ್ದು, ಬಸ್ಸನ್ನು ಜಪ್ತು ಮಾಡಿದ್ದು ತಾನೂ ಟೈಯರ್ ಮತ್ತು ಡಿಸೇಲ್ ಕಳುವು ಮಾಡುವ ಸಲುವಾಗಿ ಬಸ್ಸನ್ನು ಕಳ್ಳತನ ಮಾಡಿದ ಕುರಿತು ಒಪ್ಪಿಕೊಂಡಿದ್ದಾನೆ,ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೊಪ್ಪಿಸಿದ್ದಾರೆ.
“ಪ್ರಶಂಸೆ”
ಈ ಪ್ರಕರಣದ 24 ಗಂಟೆಯೊಳಗಾಗಿ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿ ಮತ್ತು ಬಸ್ಸು ಪತ್ತೆ ಮಾಡಿದ್ದಕ್ಕಾಗಿ,ಎಸ್.ಪಿ,ಕೂಡ್ಲಿಗಿ ಉಪವಿಭಾಗದ ಡಿ.ಎಸ್ಪಿ, ತನಿಖಾಧಿಕಾರಿಗಳಾದ ಹ.ಬೊ.ಹಳ್ಳಿ ಸಿ.ಪಿ.ಐ ವಿಕಾಸ್ ಲಮಾಣಿ,ಪಟ್ಟಣದ ಪಿ.ಎಸ್.ಐ. ಮೌನೇಶ್ ರಾಠೋಡ್, ಪಿ.ಎಸ್.ಐ. [ಕಾ.ಸು) ಬೀಬಿ ಮರ್ರಮ್, [ತನಿಖೆ) ಎ.ಎಸ್.ಐ ಎನ್. ಮುರಾರಿ, ಹಾಗೂ ಸಿಬ್ಬಂದಿಗಳಾದ ಹೆಗ್ಗಪ್ಪ, ದೇವೇಂದ್ರ, ವಿಶ್ವನಾಥ,ಯು.ಚಿದಾನಂದ, ಕೆ. ನಂದೀಶ್, ಕೆ.ಹೆಚ್, ಚಿದಾನಂದ ಸಂತೋಷ್,ಪರಶುರಾಮರವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
