ರುಪಾಯಿ ದುರ್ಬಲಗೊಂಡಿಲ್ಲ

ಬೆಳಗಾಯಿತು ವಾರ್ತೆ | Www.belagayithu.in
ನವದೆಹಲಿ: ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಗುರುವಾರ 90.56ರವರೆಗೆ ಕುಸಿದಿತ್ತು. ಪ್ರತೀ ಡಾಲರ್​ಗೆ ರುಪಾಯಿ ಮೌಲ್ಯ 90ರ ಗಡಿ ದಾಟಿದ್ದು ಇದೇ ಮೊದಲು. ದಿನದಿಂದ ದಿನಕ್ಕೆ ರುಪಾಯಿ ಕರೆನ್ಸಿ ಮೌಲ್ಯ (Dollar vs Rupee) ಕುಂದುತ್ತಲೇ ಇದೆ. ಕೆಲ ವರದಿಗಳ ಪ್ರಕಾರ ಈ ವರ್ಷ ಏಷ್ಯಾದ ಕರೆನ್ಸಿಗಳ ಪೈಕಿ ರುಪಾಯಿಯದ್ದೇ ಅತ್ಯಂತ ಕಳಪೆ ಸಾಧನೆ ಎನ್ನಲಾಗಿದೆ. ಎಸ್​ಬಿಐ ರಿಸರ್ಚ್​ನ ವರದಿಯೊಂದರ ಪ್ರಕಾರ, ರುಪಾಯಿ ಮೌಲ್ಯ ಕಡಿಮೆ ಆಗುತ್ತಿದೆಯಾದರೂ, ಅದು ದುರ್ಬಲಗೊಂಡಿಲ್ಲ ಎಂದಿದೆ.
‘ರುಪಾಯಿ ಇಳಿಯುತ್ತಿದೆ ಎಂದರೆ ಅದು ದುರ್ಬಲ ಕರೆನ್ಸಿ ಎಂದೇನಲ್ಲ. ಆಂತರಿಕ ಶಕ್ತಿಯು ಬಾಹ್ಯ ಶಕ್ತಿಗಳನ್ನು ಪ್ರತಿರೋಧಿಸಬೇಕು. ರುಪಾಯಿ ದರ ಕುಸಿತದಿಂದ ಮಾರುಕಟ್ಟೆಯ ಭಾವನೆಗಳಿಗೆ ಘಾಸಿ ಆಗಬಹುದು. ಆದರೆ, ಕರೆನ್ಸಿ ನಿರ್ವಹಣೆಯು ಸೆಂಟ್ರಲ್ ಬ್ಯಾಂಕ್​ನ (RBI) ಜವಾಬ್ದಾರಿಯಲ್ಲ ಎಂಬುದೂ ಹೌದು,’ ಎಂದು ಎಸ್​ಬಿಐ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles