ಬೆಳಗಾಯಿತು ವಾರ್ತೆ.
• ಶಿವಾನಂದ ಶಿವಶರಣ
ಚಡಚಣ : ಸಮೀಪದ ಬಳ್ಳೊಳ್ಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 52ರ ಮೇಲೆ ವಾಹನಗಳು ಬೆಂಕಿಗೆ ಆಹುತಿಯಾದ ಸರಣಿ ಘಟನೆ ನಡೆದರೂ ಹೆದ್ದಾರಿ ಪ್ರಾಧಿಕಾರದವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಶನಿವಾರ ಸಂಜೆ ಮತ್ತೊಂದು ಕಾರು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ.
ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿಮೇಲೆ ಈ ಮೊದಲು ಹಲವಾರು ಘಟನೆಗಳು ಇಗಾಗಲೆ ಸಂಭವಿಸಿವೆ. ಇವೆಲ್ಲವನ್ನು ಕಂಡು ಕಾಣದಂತೆ ಹೆದ್ದಾರಿ ಪ್ರಾಧಿಕಾರದವರು ಸುಮ್ಮನ್ನೆ ಕುಳಿತ್ತಿದ್ದಾರೆ. ಅವಘಡ ತಡೆಗಟ್ಟುಲು ಯಾವುದೇ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ಸುಮಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದನ್ನು ಕಂಡು ಹಲವಾರು ಬಾರಿ ಜನರು ಝಳಕಿ ಗ್ರಾಮದಲ್ಲಿ ಅಗ್ನಿಶಾಮಕ ಘಟಕ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ.
ಇವೆಲ್ಲವುಗಳು ಹೆದ್ದಾರಿ ಪ್ರಾಧಿಕಾರದವರು ಕರ ವಸೂಲಿ ಮಾಡುವುದರಲ್ಲಿ ಯೋಜನೆಗಳು ರೂಪಿಸಿಕೊಳ್ಳಬೇಕು. ವಾಹನಗಳು ರಸ್ತೆ ಮಧ್ಯದಲ್ಲಿ ಇಂಧನ ಖಾಲಿಯಾಗಿ ವಾಹನಕ್ಕೆ ಯಾವುದೇ ರೀತಿಯಾದ ತೊಂದರೆಯಾದರೆ ಕೂಡಲೆ ಹೆದ್ದಾರಿ ಸಂಬಂಧಪಟ್ಟ ಸಿಬ್ಬಂದಿ ಸ್ಥಳಕ್ಕೆ ದೌಡಯಿಸಿ ಸಮಸ್ಯೆ ಪರಿಹರಿಸಬೇಕಾದ ಕೆಲಸ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಬೇಕು. ಇಲ್ಲಿ ಯಾವುದೇ ತರನಾದ ಸಮಸ್ಯೆಗೆ ಪರಿಹಾರ ನೀಡದ ಹೆದ್ದಾರಿ ಪ್ರಾಧಿಕಾರ ಬಳ್ಳೊಳ್ಳಿ ಮತ್ತು ಝಳಕಿ ಗ್ರಾಮಸ್ಥರ ಆರೋಪವಾಗಿದೆ.
ಶನಿವಾರ ವಿಜಯಪುರದಿಂದ ಕೇಗಾಂವ ಗ್ರಾಮಕ್ಕೆ ಹೊರಟ ಕಾರ್ ಎಂಎಚ್ 05 ಬಿಎಸ್ 6626 ವಾಹನ ಮಾಲಿಕರು ಮನೋಹರ ಪಾಟೀಲ ಕಾರ್ಯ ನಿಮಿತ್ತ ವಿಜಯಪುರಕ್ಕೆ ತೆರಳಿದ್ದರು. ಮರಳಿ ತಮ್ಮ ಮಹಾರಾಷ್ಟ್ರದ ಕೇಗಾಂವ ಗ್ರಾಮಕ್ಕೆ ತೆರಳುವಾಗ ಬಳ್ಳೊಳ್ಳಿ –ಝಳಕಿ ಮಧ್ಯದಲ್ಲಿ ಅಚಾನಕ್ಕಾಗಿ ಇಂಜನಿನಲ್ಲಿ ಬೆಂಕಿ ಕಂಡ ಕೂಡಲೆ ವಾಹನದಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಬೆಂಕಿಯಿಂದ ಕೇಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಝಳಕಿ ಠಾಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.